ಕೀಲು ರೋಗ ತಜ್ಞರಾದ ಡಾ ಜಾನ್ ಎಬಿನೇಜರ್ ರವರು ಕೀಲುರೋಗಗಳ ಬಗ್ಗೆ ಅನೇಕ ಪಾಂಡಿತ್ಯಪೂರ್ಣ ಗ್ರಂಥಗಳನ್ನು ಪ್ರಕಟಿಸಿ ತನ್ನದೇ ಆದ ಗಿನ್ನೆಸ್ ದಾಖಲೆ ಮಾಡಿದ್ದಾರೆ. ರೋಗ ಬಂದಾಗ ಚಿಕಿತ್ಸೆಗಾಗಿ ಪರದಾಡುವ ಬದಲು ರೋಗವೇ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂಬ ತಮ್ಮ ಪ್ರತಿಪಾದನೆಯನ್ನು ಇಲ್ಲಿಯೂ ಮುಂದುವರೆಸಿರುವ ಲೇಖಕರು ಉತ್ತಮ ಜೀವನಶೈಲಿ, ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಒತ್ತಡರಹಿತ ಬದುಕುಗಳ ಅಗತ್ಯತೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ.