‘ಒನ್ ಲೈನ್ ನಾಲೆಡ್ಜ್’ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತ ಜ್ಞಾನಭಂಡಾರ. ಸಾಮಾನ್ಯ ಜ್ಞಾನವೆನ್ನುವುದು ಸಾಗರದಷ್ಟು ವಿಶಾಲವಾದದ್ದು, ಅದರ ಬಗ್ಗೆ ಯಾರು ಎಷ್ಟು ಬರೆದರೂ ಅದು ಕಡಿಮೆಯೇ, ಈಗಾಗಲೇ ಈ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಬರುತ್ತಲೂ ಇವೆ. ಡಾ. ಕೆ. ಪೂರ್ಣಿಮಾ ಕೋಡೂರು ಅವರು ಕೂಡಾ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಅವುಗಳ ನಡುವೆ ಇದೊಂದು ವಿಭಿನ್ನ ಪ್ರಯತ್ನವಾಗಿದೆ. ಹೆಸರೇ ಹೇಳುವಂತೆ ಇದು ಒನ್ ಲೈನ್ ನಾಲೆಡ್ಜ್, ಜಗತ್ತಿನ ಜ್ಞಾನವನ್ನೆಲ್ಲ ಒಂದೇ ಸಾಲಿನಲ್ಲಿ ಹೇಳುವಂತಹ ಪುಟ್ಟ ಪ್ರಯತ್ನವಿದು. ಈ ಪುಸ್ತಕ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಓದುವಂತಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಹದ್ದಾಗಿದೆ. ಎಲ್ಲ ವಿಷಯಗಳ ಬಗ್ಗೆಯೂ ಇಲ್ಲಿ ಒಂದೊಂದು ಸಾಲಿನ ಮಾಹಿತಿ ನೀಡಲಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಸುಲಭವಾಗಿ ಅರ್ಥವಾಗುವಂತಹದ್ದಾಗಿದೆ. ಸರಳವಾಗಿದೆ.
ಆಯುರ್ವೇದ ವೈದ್ಯರು ಮತ್ತು ವೈದ್ಯ ಸಾಹಿತಿಯೂ ಆಗಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಆಯುರ್ವೇದವನ್ನು ಪ್ರಚುರ ಪಡಿಸಬೇಕು ಹಾಗೂ ಸರಳವಾಗಿ ಈ ಬಗ್ಗೆ ಕನ್ನಡದಲ್ಲಿ ಜನರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈವರೆಗೆ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯ ಟೈಮ್ಸ್, ತರಂಗ, ಪ್ರಿಯಾಂಕ, ಗೃಹಶೋಭಾ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಖ್ಯೆ 300ನ್ನೂ ಮೀರುತ್ತದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದಲ್ಲಿ ‘ಆವಿ ಆಯುರ್ವೇದಿಕ್ ಹೆಲ್ತ್ ಹೋಮ್’ ಎನ್ನುವ ಆಯುರ್ವೇದಿಕ್ ಕ್ಲಿನಿಕ್‌ನ್ನು ನಡೆಸುತ್ತಿರುವ ಇವರು ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸೇರಿದಂತೆ ಹಲವು ಸಮಾಜ ...
READ MORE