ನಮಗರಿವಿಲ್ಲದೆ ಬರುವ ಆರು ರೋಗಗಳು

Author : ನಾ. ಸೋಮೇಶ್ವರ

Pages 146

₹ 75.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ನಮಗೆ ಯಾವುದೇ ಅರಿವೇ ಇಲ್ಲದೆ , ಒಮ್ಮೆಲೆ ನಮ್ಮ ಮೇಲೆ ಬಂದು ಬಿಡುತ್ತದೆ. ಇಂತಹ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖಕ ನಾ.ಸೋಮೇಶ್ವರರು ಈ ಕೃತಿಯನ್ನು ರಚಿಸಿದ್ದಾರೆ. ಬೊಜ್ಜು, ಡಯಾಬಿಟಿಸ್, ಇಚ್ಛಿತ್ತವಿಕಲತೆ, ಸ್ತನಕ್ಯಾನ್ಸರ್, ಗೀಳು, ಶುಕ್ಲಗ್ರಂಥಿಯ ಕ್ಯಾನ್ಸರ್ ಹೀಗೆ ಹಲವು ರೋಗಗಳ ಸಂಕ್ಷಿಪ್ತ ಮತ್ತು ಉಪಯುಕ್ತ ಮಾಹಿತಿ ಕೊಡುವುದರ ಜೊತೆಗೆ ನಮಗೆ ಗೊತ್ತಿರದ ವೈದ್ಯಕೀಯ ಜಗತ್ತಿನ ಕೆಲ ಸಂಗತಿಗಳನ್ನೂ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಈ ಕೃತಿಯೂ ವಿವಿಧ ರೋಗಗಳ ಬಗ್ಗೆ ಜನರಲ್ಲಿ ಮುನ್ನೆಚ್ಚರಿಕಾ ಕ್ರಮುವನ್ನು ಮೂಡಿಸುತ್ತದೆ.

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books