ಭಾರತೀಯ ಜೀವನ ಪದ್ಧತಿಗೆ ಅನುಗುಣವಾಗಿ ಪ್ರಕೃತಿ ಚಿಕಿತ್ಸಾ ವಿಧಾನವು ಮಾನ್ಯತೆಯನ್ನು ಪಡೆದಿದ್ದು, ಇದು ಆಹಾರ, ನೀರು, ಗಾಳಿ, ಸೂರ್ಯ ಮುಂತಾದ ಪ್ರಕೃತಿ ತತ್ವಗಳಿಂದ ವೈಧಾನಿಕ ರೂಪವನ್ನು ಪಡೆದಿದೆ. ಮಹಾತ್ಮಾಗಾಂಧೀಜಿಯವರು ಪ್ರಕೃತಿ ಚಿಕಿತ್ಸೆಯ ಕ್ರಮವನ್ನು ಅನುಸರಿಸುತ್ತಿದ್ದರು. ಈ ಚಿಕಿತ್ಸಾ ವಿಧಾನದ ಮೂಲಕ ಸಹಸ್ರಾರು ಜನ ಆರೋಗ್ಯವನ್ನು, ನೆಮ್ಮದಿಯನ್ನು ಪಡೆದಿದ್ದಾರೆ. ಈ ಎಲ್ಲ ಸಂಗತಿಗಳನ್ನು ಪ್ರಕೃತಿ ಜೀವನ ಗ್ರಂಥವು ನಮಗೆ ಮನವರಿಕೆ ಮಾಡಿಕೊಡುತ್ತದೆ. ಪ್ರಕೃತಿ ಚಿಕಿತ್ಸೆಯ ಮೂಲತತ್ವಗಳು ಹಾಗೂ ಅದರಿಂದ ಬರುವ ಸಂಪೂರ್ಣ ಆರೋಗ್ಯದ ಬಗೆಗಳನ್ನು ಈ ಗ್ರಂಥದಲ್ಲಿ ಸರಳವಾಗಿ ನಿರೂಪಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಆರೋಗ್ಯ; ಆಹಾರ, ನೀರು ,ಗಾಳಿ; ಸೂರ್ಯ; ಶೂನ್ಯ ,ತತ್ವಗಳು; ಜೀವಶಕ್ತಿ ,ಯೋಗಾಸನ; ಮಾನಸಿಕ ಆರೋಗ್ಯ
ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ ಅವರು ಮಂಡ್ಯ ಜಿಲ್ಲೆಯ ಚೌದರೀಕೊಪ್ಪಲಿನವರು. ತಂದೆ ಹೊನ್ನಪ್ಪ. ತಾಯಿ ತಿಮ್ಮಮ್ಮ. ಹೈಸ್ಕೂಲಿನಲ್ಲಿದ್ದಾಗಲೇ ಶಾಲೆಯಿಂದ ಹೊರಡಿಸುತ್ತಿದ್ದ ‘ವನಸುಮ’ ಎಂಬ ಪತ್ರಿಕೆಗೆ ಭಗವದ್ಗೀತೆಯ ತಾತ್ಪರ್ಯ, ಗೀತೆಯ ಸಂದೇಶದ ವಿಚಾರವಾಗಿ ಲೇಖನ ಮತ್ತು ಗೀತೋಪದೇಶದ ಚಿತ್ರಗಳನ್ನು ಬರೆಯುತ್ತಿದ್ದರು. ಭಾರತ್ ಅರ್ಥ್ ಮೂವರ್‍ಸ್ (ಲಿ) ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ನಿವೃತ್ತರು. ಪ್ರಕೃತಿ ಜೀವನ ಕೇಂದ್ರದ ಸ್ಥಾಪಕರಾಗಿರುವ ಅವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ದವನಹಳ್ಳಿ ಕೃಷ್ಣರರ್ದ ಸ್ಮಾರಕ ಸಮಿತಿಗಳ ನಿಕಟ ಸಂಪರ್ಕದಲ್ಲಿದ್ದವರು. ಎಂಜಿನಿಯರ್ ಆಗಿದ್ದ ಅವರು ರಚಿಸಿದ ‘ನಾ ಕಂಡ ಜರ್ಮನಿ' ಪ್ರವಾಸ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ. ಪ್ರಕೃತಿ ...
READ MORE