ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ,ಇವುಗಳನ್ನು ಮಾನವ ಪಂಚೇದ್ರಿಯಗಳು. ಮನುಷ್ಯನ ಬದುಕಿನಲ್ಲಿ ಪಂಚೇಂದ್ರೀಯಗಳ ಪಾತ್ರ ಅಪಾರ ಮತ್ತು ಅಷ್ಟೇ ಪ್ರಮುಖವಾದುದು. ಐದು ಇಂದ್ರಿಯಗಳಲ್ಲಿ ಯಾವುದೇ ಒಂದು ಇಂದ್ರಿಯವು ತನ್ನ ತನ್ನ ಕಾರ್ಯ ವೈಖರಿಯನ್ನು ನಿಲ್ಲಿಸಿದರೂ , ಮನುಷ್ಯ ಜೀವನಪೂರ್ತಿ ಕಷ್ಟದಿಂದ ದಿನದೂಡಬೇಕಾಗಿದೆ. ಹೀಗಾಗಿ ವೈದ್ಯಕೀಯ ಲೋಕವು ಇವುಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಯನ್ನು ನೀಡುತ್ತದೆ. ವಿಪರ್ಯಾಸವೆಂದರೆ ಸ್ವಯಂ ಚಿಕಿತ್ಸೆಯಂತಹ ಅಪಾಯಕಾರಿ ಹಾದಿ ಹಿಡಿಯುವ ಜನ ಸ್ನೇಹಿತರೊ, ಬಂಧುಗಳು, ಆತ್ಮೀಯರೊ, ಅಕ್ಕಪಕ್ಕದವರೋ ಅಥವಾ ಗೊತ್ತುಗುರಿಯಿಲ್ಲದ ದಾರಿಹೋಕರೋ ,ಸಾಮಾನ್ಯ ಜನರು ಇವರಿಗೆ ಎಷ್ಟೇ ಹೇಳಿದರೂ ಇಂತ ಅಪಾಯಕಾರಿ ಸ್ವಯಂ ಚಿಕಿತ್ಸೆಯನ್ನು ಬಳಸಿ ತಮ್ಮ ಪಂಚೇದ್ರಿಯಗಳಿಗೆ ಇಂದ್ರಿಯಗಳಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡ ನೇತ್ರ ತಜ್ಞರಾದ ಡಾ.ಎಚ್.ಎಸ್.ಮೋಹನ್ ಅಗತ್ಯವಾದ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ.
ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ. ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು. ...
READ MORE