’ಆರೋಗ್ಯ ತರಂಗ’ ಪುಸ್ತಕದಲ್ಲಿ ಒಟ್ಟು 25 ಲೇಖನಗಳಿವೆ. ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಲೋಕದ ಮಾಹಿತಿಗಳನ್ನು ಇಲ್ಲಿ ಕೊಡಲಾಗಿದೆ. ಅಪಘಾತ ಅಥವಾ ಆಕಸ್ಮಿಕ ಅವಘಡಗಳಲ್ಲಿ ಪ್ರಥಮ ಸಹಾಯದ ಮಹತ್ವ, ನಿತ್ಯವೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಬಳಸುವ ಸೊಳ್ಳೆ ನಿವಾರಕಗಳ ಕುರಿತು ಪ್ರಯೋಗಾಲಯಗಳ ಬೆಚ್ಚಿಬೀಳಿಸುವ ವರದಿಯ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
ಪುಟ್ಟ ಕಂದಮ್ಮಗಳಿಗೆ ಕಾಟ ಕೊಡುವ ಕಿವಿ ಸೋರುವಿಕೆ, ನ್ಯೂಮೋನಿಯ, ನವಜಾತ ಶಿಶುಗಳಿಗೆ ಕಾಂಗರೂ ಚಿಕಿತ್ಸೆಯ ಮಹತ್ವ, ಎದೆಹಾಲಿನ ಮಹತ್ವವನ್ನು ಸಾರುತ್ತಲೇ ವಿಜಯಪುರ ಜಿಲ್ಲೆಯಲ್ಲಿ ತಲೆದೋರಿದ ರಿಕ್ಸೆಟ್ಸೆಯಾದಂಥ ಅಪರೂಪದ ಕಾಯಿಲೆಗಳ ಕುರಿತು ಸಮಗ್ರ ಮಾಹಿತಿಯ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ. ದೈಹಿಕ ಆರೋಗ್ಯವಷ್ಟೇ ಅಲ್ಲ ಮಾನಸಿಕ ಆರೋಗ್ಯದ ಮಹತ್ವವನ್ನು ಇಲ್ಲಿರುವ ಲೇಖನಗಳು ವಿವರಿಸುತ್ತದೆ.
©2024 Book Brahma Private Limited.