ಡಾ. ಎಚ್. ಎಸ್. ಅನುಪಮಾ ಅವರ ’ಜೀವಕೋಶ’ ವೈದ್ಯಲೋಕದ ಕಥನದಲ್ಲಿರುವ ಬರಹಗಳು ಅಸಹಾಯಕ ಜನರ ದೇಹದ ಮತ್ತು ಮನಸ್ಸಿನ ಕಾಯಿಲೆಗಳಿಗೆ ಕಾರಣವನ್ನು ದೇಹ ಮತ್ತು ಮನಸ್ಸುಗಳಲ್ಲಿ ಮಾತ್ರವಲ್ಲದೆ, ಮನುಷ್ಯ ಸಮಾಜದಲ್ಲಿ ಕೂಡ ಶೋಧಿಸುವುದಕ್ಕೆ ಧಾವಿಸುವುದು. ಈ ಕಾರಣದಿಂದ ಇವು ಕೇವಲ ವೈದ್ಯಕೀಯ ಬರೆಹಗಳಾಗದೇ, ಅದರಾಚೆ ಹೋಗಿ ಸಾಮಾಜಿಕ ಚಿಂತನೆಗಳೂ ಆಗಿವೆ.
ದೇಹದ ಕಾಯಿಲೆಗೆ ಕಾರಣವಾಗುವ ಮನಸ್ಸಿನ ಪ್ರಕ್ಷುಬ್ದತೆ ಹುಟ್ಟುವುದು ಹೆಚ್ಚಾಗಿ ಮಹಿಳೆಯರಲ್ಲೇ. ಹೀಗಾಗಿ ಇಡೀ ಕೃತಿಯು ಸ್ತ್ರೀ ಸಂಕಥನವೂ ಆಗಿಬಿಟ್ಟಿದೆ. ತಂದೆಯಿಂದ ಅತ್ಯಾಚಾರಕ್ಕೆ ಒಳಗಾಗುವ ಎಳೆಯ ಹುಡುಗಿಯ ಬಗೆಗಿನ ಕಥೆ ಓದುಗರ ಮನಸ್ಸನ್ನು ಕದಡಿಹಾಕುತ್ತದೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE