ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡಿ ಇಡೀ ಸಮುದಾಯವನ್ನೇ ಪೀಡಿಸಲಾರಂಭಿಸುತ್ತದೆ. ಹೀಗಾಗಿ ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಮತ್ತು ಅಷ್ಟೇ ಅತ್ಯಾವಶ್ಯಕ ಕೂಡ. ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರಿಂದ, ಪೌಷ್ಠಿಕ ಆಹಾರ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂಬ ಉಪಯುಕ್ತ ಮಾಹಿತಿಯನ್ನು ಲೇಖಕರಾದ “ವೈದ್ಯಸಾಹಿತಿ ಎನ್. ವಿಶ್ವರೂಪಾಚಾರ್”ರವರು ಸರಳವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
’ವಿಶ್ವರೂಪ’ ಎಂಬ ಕಾವ್ಯನಾಮದಿಂದ ಬರೆಯುವ ಎನ್. ವಿಶ್ವರೂಪಾಚಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರದವರು. ತಂದೆ ಸಿ.ಎಂ. ನಂಜುಂಡಾಚಾರ್ ಮತ್ತು ತಾಯಿ ಲಿಂಗಮ್ಮ. ಆರಂಭಿಕ ಶಿಕ್ಷಣವನ್ನು ವಿಜಯಪುರ ಹಾಗೂ ರಾಮನಗರಗಳಲ್ಲಿ ಪಡೆದ ಅವರು ಮೈಸೂರು ಐ.ವಿ. ಸಂಜೆ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೆಲ್ತ್ ಸೂಪರ್‌ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 34 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ 13 ವರ್ಷ ಜನಾರೋಗ್ಯ ಬೋಧಕರಾಗಿ ಕೆಲಸ ಮಾಡಿರುವ ಅವರು ಹೈಸ್ಕೂಲ್‌ನಲ್ಲಿ ...
READ MORE