ಖ್ಯಾತ ವಿಜ್ಞಾನಿ ಡಾ. ಶಂಭುನಾಥ ಡೇ ಅವರ ಸಂಶೋಧನೆಗಳ ಕುರಿತು ಲೇಖಕ ಹಾಗೂ ವಿಜ್ಞಾನಿ ಡಾ. ಎಂ.ಎಸ್.ಎಸ್. ಮೂರ್ತಿ ಅವರು ರಚಿಸಿದ ಕೃತಿ-ಕಾಲರಾ ನಂಜು. ಕಾಲರಾ ರೋಗ ಕುರಿತು ಸಂಫೂರ್ಣ ಸಂಶೋಧನಾಧರಿತ ಬರಹಗಳ ಒಳನೋಟ ಇಲ್ಲಿದೆ. ಆ ಮೂಲಕ ವಿಜ್ಞಾನಿ ಡಾ. ಶಂಭುನಾಥ್ ಡೇ ಅವರ ವೈಜ್ಞಾನಿಕ ವ್ಯಕ್ತಿತ್ವ ಹಾಗೂ ಮನುಕುಲಕ್ಕೆ ಅವರು ನೀಡಿರುವ ವೈದ್ಯಕೀಯವಾಗಿ ವೈವಿಧ್ಯಮಯ ಕಾಣಿಕೆಗಳ ಸ್ವರೂಪವನ್ನು ವಿವರಿಸಿದ ಕೃತಿ ಇದು.
ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ 40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ. ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...
READ MORE