ದೇಹಾರೋಗ್ಯದ ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಪರಿಹಾರೋಪಾಯಗಳನ್ನು ಒದಗಿಸುವುದು ಕೃತಿಯ ಉದ್ದೇಶ. ಎರಡು ಭಾಗಗಳಾಗಿ ಕೃತಿ ವಿಂಗಡಣೆಯಾಗಿದೆ. ಮೊದಲ ಭಾಗದಲ್ಲಿ ಆರೋಗ್ಯ ಸಮಸ್ಯೆಗಳ ಸುತ್ತಲೂ ಹಬ್ಬಿರುವ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಚರ್ಚಿಸಲಾಗಿದೆ. ಎರಡನೆಯ ಭಾಗದಲ್ಲಿ ಆರೋಗ್ಯ ಸಮಸ್ಯೆಗಳನ್ನು ಮತ್ತು ಪ್ರಸ್ತುತ ವಿಚಾರಗಳನ್ನು ನೇರವಾಗಿ ಆಪ್ತ ಭಾಷೆಯಲ್ಲಿ ಹೇಳಲಾಗಿದೆ. ಅನುಭವೀ ವೈದ್ಯ ಮತ್ತು ಲೇಖಕ ರಚಿಸಿದ, ಓದಬೇಕಾದ ಪುಸ್ತಕ. ವಯಸ್ಕ ಮನೋರೋಗಗಳ ಜನಸಾಮಾನ್ಯರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿ ಪ್ರಾಥಮಿಕ ಹಂತದಲ್ಲಿಯೇ ಮನೋರೋಗಗಳನ್ನು ಗುರುತಿಸಿ ಪರಿಹಾರೋಪಾಯಗಳನ್ನು ಪಡೆಯಲು ಸೂಚನೆ ನೀಡುವ ಸಾರ್ಥಕ ಪ್ರಯತ್ನ ಈ ಕೃತಿ. ಸಂಕೀರ್ಣ ಮನೋವಿಜ್ಞಾನವನ್ನು ಸರಳಗೊಳಿಸಿ ಜನಪ್ರಿಯಗೊಳಿಸುವ ದಿಶೆಯಲ್ಲಿ ತುಂಬಾ ಉಪಯುಕ್ತವೆನಿಸಿರುವ ಇದು ಪರಿಷ್ಕೃತ ಎರಡನೇ ಮುದ್ರಣ.
ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ...
READ MORE