ಬದುಕು ಹಲವು ತಿರುವುಗಳ ದಾರಿ, ಇಲ್ಲಿ ಯಾವುದು ಶಾಶ್ವತವಲ್ಲ. ಮನಸ್ಸಿನ ಹಲವು ತಿರುವುಗಳಲ್ಲಿ ದುಃಖ, ಸಿಟ್ಟು, ಶ್ಲಾಘನೆ, ಮೆಚ್ಚುಗೆ, ಭಯ, ರೋಗರುಜಿನ, ಅನಾಥಪ್ರಜ್ಞೆ, ಪಾಪಪ್ರಜ್ಞೆ, ಮಾನ, ಮರ್ಯಾದೆ, ಪ್ರಾಣಭೀತಿಯಂತಹ ಮೈಲಿಗಲ್ಲುಗಳು ಎದುರಾಗುತ್ತಲೇ ಇರುತ್ತದೆ. ಇವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಬೇಕೆಂದರೆ ಅದಕ್ಕೆ ಯೋಗ್ಯವಾದ ಮನಸ್ಸು ನಮ್ಮ ದೇಹದಲ್ಲಿರಬೇಕು. ಸದಾ ಚಂಚಲ ಮತ್ತು ಅಸ್ಥಿರತೆಗಳಿಗೆ ಒಳಗಾಗುವ ಅಪಾಯದಂಚಿನ ಮನಸ್ಸಿನ ಸಮಸ್ಯೆಗಳು, ನೋವುಗಳು, ಆಘಾತ, ಸಮಾಧಾನಗಳು ಮುಂತಾದ ಪ್ರಮುಖ ಸಂಗತಿಗಳ ಕುರಿತು ಡಾ.ಸಿ.ಆರ್.ಚಂದ್ರಶೇಖರ್ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE