ಕಣ್ಣು ಕುರಿತ ವಿಸ್ತೃತ ಮಾಹಿತಿಯ ಕೃತಿ ‘ಕಣ್ಣು: 106 ಪ್ರಶ್ನೆಗಳು.’ ವೈದ್ಯ ಬರೆಹಗಾರ ಡಾ. ಎಚ್.,ಎಸ್. ಮೋಹನ್ ಅವರು ರಚಿಸಿದ್ದು, ಕಣ್ಣುಗಳ ಸಮಸ್ಯೆಗಳು, ಔಷಧೋಪಚಾರ, ಮುಂಜಾಗ್ರತೆ ಕ್ರಮಗಳು ಇತ್ಯಾದಿ ಕುರಿತ ವೈದ್ಯಕೀಯ ಸಲಹೆ ರೂಪದ ಕೃತಿ ಇದು. ದೃಷ್ಟಿದೋಷ ಉಂಟಾಗುವುದು ಹೇಗೆ? ಕಣ್ಣಿನ ಪೊರೆ ಬರಲು ಕಾರಣವೇನು? ಇದಕ್ಕೆ ಏನು ಚಿಕಿತ್ಸೆ? ಸಮೀಪದೃಷ್ಟಿ - ದೂರದೃಷ್ಟಿ ಎಂದರೇನು? ಗ್ಲೊಕೊಮಾ ಎಂದರೇನು? ಇದು ಯಾವಾಗ ಬರುತ್ತದೆ? ಇತ್ಯಾದಿ ಕಣ್ಣಿಗೆ ಸಂಬಂಧಿಸಿದ 106 ಪ್ರಶ್ನೆಗಳಿಗೆ ಉತ್ತರ ನೀಡುವ ಕೃತಿ.
©2024 Book Brahma Private Limited.