ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ? ಎಂಬುದು ಲೇಖಕ ಹಾಗೂ ವಿಜ್ಞಾನಿ ಡಾ. ಎಂ.ಎಸ್.ಎಸ್. ಮೂರ್ತಿ ಅವರ ಕೃತಿ. ಮಕ್ಕಳೇ ಮನೆಗೆ ಮಾಣಿಕ್ಯ. ಮನೆಗೊಂದು ಮಗುವಿರಲೆಂದೂ ಈ ಸಮಾಜ ಬಯಸುತ್ತದೆ. ಮಕ್ಕಳು ಇಲ್ಲದವರನ್ನು ಸಮಾಜ ತಿರಸ್ಕಾರದಿಂದ ಕಾಣುತ್ತದೆ. ಹಲವು ಕಾರಣಗಳಿಂದ ಬಂಜೆ ಎನಿಸಿಕೊಂಡ ಮಹಿಳೆಗೆ ಮಗುವನ್ನು ಪಡೆಯುವ ಸಾಧ್ಯತೆ ವೈದ್ಯಕೀಯ ರಂಗದ ಸಂಶೋಧನೆಗಳಿಂದ ಯಶಸ್ವಿಯಾಗಿದೆ. ಮಾತ್ರವಲ್ಲದೆ, ಬಂಜೆ ಎಂಬ ಪದ ಇದುವರೆಗೂ ಸ್ತ್ರೀಯರನ್ನಷ್ಟೇ ಉದ್ದೇಶಿಸಿ ಹೇಳಿದ್ದರೂ ಇದು ದಂಪತಿಗಳಿಬ್ಬರಲ್ಲೂ ಇರುವ ದೋಷ ಎಂದು ವೈದ್ಯಕೀಯ ವರದಿಗಳು ತಿಳಿಸುತ್ತವೆ. ಸಹಜ ಗರ್ಭಧಾರಣೆ ವಿಫಲವಾದ ಸಂದರ್ಭದಲ್ಲಿ ಇನ್ ವಿಟ್ರೊ ಫರ್ಟಿಲೈಸೇಶನ್ ಎಂಬ ವಿನೂತನ ವಿಧಾನ ದಂಪತಿಗಳಲ್ಲಿ ಆಶಾವಾದ ಮೂಡಿಸಿದೆ. ಇದನ್ನು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನವೆಂದು ಕರೆಯಲಾಗಿದ್ದು ವೈದ್ಯಕೀಯ ರಂಗದಲ್ಲಿ ಹೊಸ ಹೆಜ್ಜೆ ಮೂಡಿಸಿದೆ. ಮನುಕುಲವನ್ನು ಕಾಡುತ್ತಿರುವ ಬಂಜೆತನ ಎಂಬ ಸ್ಥಿತಿಯಿಂದ ಈಗ ಮುಕ್ತವಾದಂತೆ ಆಗಿದೆ.
ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ 40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ. ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...
READ MORE