`ಆಧುನಿಕ ಖಾಯಿಲೆಗಳ ವಿಸ್ಮಯಲೋಕ’ ಕೃತಿಯು ಕೆ. ಸುಶೀಲಾ ಅವರ ಬರಹಗಳ ಸಂಕಲನವಾಗಿದೆ. ಆರೋಗ್ಯ, ವೈದ್ಯಕೀಯ, ಮನೋವೈದ್ಯಕೀಯ ವಿಚಾರಗಳನ್ನು ಈ ಕೃತಿಯು ಒಳಗೊಂಡಿದೆ. ಖಾಯಿಲೆಗಳ ಕುರಿತ ವಿಚಾರಗಳನ್ನು ಹಾಗೂ ಅವುಗಳ ನಿವಾರಣೆಗೆ ಬೇಕಾಗಿರುವ ಮಾಹಿತಿಗಳನ್ನು ಈ ಕೃತಿ ಕಟ್ಟಿಕೊಡುತ್ತದೆ. ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ರೋಗಗಳಿಂದ ಜನರು ತತ್ತರಿಸಿ ಹೋಗುತ್ತಿದ್ದು, ಹಲವಾರು ರೋಗಗಳ ಬಗ್ಗೆ ಜನರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಂತಹ ಆಧುನಿಕ ಖಾಯಿಲೆಗಳ ಕುರಿತು ದೃಷ್ಟಿಯನ್ನು ಇಟ್ಟಿರುವ ಈ ಕೃತಿಯು ಬಹಳಷ್ಟು ಮಂದಿಗೆ ಉಪಯುಕ್ತವಾಗಿದೆ.
©2024 Book Brahma Private Limited.