ನಮ್ಮ ಆಧುನಿಕ ಜೀವನ ಶೈಲಿಯ ದುಡಿಮೆ ಮತ್ತಿತರ ಒತ್ತಡದಿಂದ ನಮ್ಮ ಆರೋಗ್ಯ ಬಹಳ ಸಂಕೀರ್ಣ, ಸೂಕ್ಷ್ಮವಾಗುತ್ತಿದೆ. ಓಡುವಂತಹ ಬದುಕಿನಲ್ಲಿ ನಮ್ಮ ಆರೋಗ್ಯದಲ್ಲಿ ಅನೇಕ ಮುಖ್ಯ ಕಾಯಿಲೆಗೆ ಜಾಗ ನೀಡುತ್ತದೆ. ಅದರಲ್ಲಿ ಅಧಿಕ ರಕ್ತದೊತ್ತಡವು ಒಂದಾಗಿದ್ದು ಅನೇಕ ದುಷ್ಪರಿಣಾಮಗಳುಂಟು ಮಾಡುತ್ತವೆ. ಇದು ಹೃದಯ, ಮೂತ್ರಪಿಂಡ, ಮಿದುಳಿನ ಕಾರ್ಯಕ್ಷಮತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ರಕ್ತದೊತ್ತಡ ಸಹಜಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯ.ಆರೋಗ್ಯಕರ ಬದುಕಿಗೆ ತಿಳುವಳಿಕೆಯ ಜತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಈ ಕೃತಿ ಒಂದು ಉತ್ತಮ ಕೈಪಿಡಿ. ಔಷಧಿಗಳ ಸೇವನೆ, ಆಹಾರ, ವ್ಯಾಯಾಮ, ಯೋಗ ಮುಂತಾದವುಗಳಿಂದ ನಿಯಂತ್ರಣ ಮಾಡಿಕೊಳ್ಳವುದರ ಬಗ್ಗೆ ವಿವರವಾಗಿ ಈ ಕೃತಿ ತಿಳಿಸುತ್ತದೆ.
©2024 Book Brahma Private Limited.