ತ್ಯಾಜವಿಲೇವಾರಿಯಿಂದ ಉಂಟಾಗುವ ಪರಿಣಾಮ, ವೈಜ್ಞಾನಿಕವಾಗಿ ಅದನ್ನು ತಡೆಗಟ್ಟುವ ಕ್ರಮವನ್ನು ಈ ಕೃತಿಯು ಓದುಗರಿಗೆ ತಿಳಿಯ ಪಡಿಸುತ್ತದೆ. ಆರೋಗ್ಯ ಕಾಪಾಡಲು ಅತ್ಯಗತ್ಯ ಅನಿವಾರ್ಯತೆಯಾದ ನೈರ್ಮಲ್ಯದ ಕುರಿತು ಚರ್ಚಿಸುತ್ತಾ ಸಾಗುವ ಈ ಕೃತಿಯು ತ್ಯಾಜ್ಯ ವಿಲೇವಾರಿ ವಿಧಾನ ಮತ್ತು ಅದರಿಂದ ಆರೋಗ್ಯದ ಮೇಲೆ ಉಂಟಾಗುವ ಪ್ರಭಾವ, ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ಲೇಖಕರು ವೈಜ್ಞಾನಿಕ ವಿಧಾನದ ಮೂಲಕ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಚರ್ಚಿಸುತ್ತಲೇ ದೇಹ ಮತ್ತು ಮನಸ್ಸುಗಳ ನೈರ್ಮಲ್ಯದ ಅಗತ್ಯತೆಯನ್ನೂ ಇಲ್ಲಿ ಓದುಗರಿಗೆ ಮನಗಾಣಿಸುವ ಪ್ರಯತ್ನವನ್ನು ಮಾಡಿದ್ದಾರೆ. ತ್ಯಾಜ ವಿಲೇವಾರಿಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಈ ಕೃತಿಯೂ ವಿವರಿಸುತ್ತದೆ.
ಲೇಖಕ ಪ್ರಕಾಶ್ ಸಿ ರಾವ್ ಅವರು ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ಜನಾರೋಗ್ಯದ ...
READ MORE