ಮನಸ್ಸು ಮತ್ತು ಆರೋಗ್ಯದಲ್ಲಿ ಕಂಡುಬರುವಂತಹ ವರ್ತನೆಗಳ ಬಗ್ಗೆ, ಗೊಂದಲಗಳ ಬಗ್ಗೆ ಬೇಕಾದ ಅಗತ್ಯ ಮಾಹಿತಿಯನ್ನು ’ಅ.ಶ್ರೀಧರ’ ಈ ಕೃತಿಯಲ್ಲಿ ನೀಡಿದ್ದಾರೆ. ಆರೋಗ್ಯ ಮನೋವಿಜ್ಞಾನಿಗಳು , ಜನರು, ಆರೋಗ್ಯವಂತನಾಗಿರಬೇಕಾದರೆ, ಬೇಕಾದಂತಹ ಆಪ್ತಸಲಹೆ, ಮುನ್ಸೂಚನೆಗಳನ್ನು ನೀಡುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಚಿಕ್ಕಚಿಕ್ಕ ಅಧ್ಯಾಯಗಳಾಗಿ ಮನೋವಿಜ್ಞಾನದ ಅರಿವನ್ನು ಈ ಕೃತಿಯೂ ಹೆಚ್ಚಿಸಬಲ್ಲದು.
ವೃತ್ತಿಯಲ್ಲಿ ಮನೋವಿಜ್ಞಾನಿಯಾಗಿರುವ ಅ. ಶ್ರೀಧರ್ ಅವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವವರು. ಇವರು ಜನಿಸಿದ್ದು 1949 ಮೇ 5ರಂದು. ಮನೋವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಶ್ರೀಧರ್ ಅವರು ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಸುಮಾರು 400 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರ ಅನಂತ ಇಂಗ್ಲಿಷ್- ಕನ್ನಡ ಮನೋವಿಜ್ಞಾನ ಪದಕೋಶಕ್ಕೆ 2004ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಉತ್ತಮ ಪುಸ್ತಕ ಪ್ರಶಸ್ತಿ ಸಂದಿದೆ. ಮನಸ್ಸು ಮತ್ತು ಆಗೋಗ್ಯ ಮುಂತಾದವು ಇವರ ಪ್ರಮುಖ ಕೃತಿಗಳು. ...
READ MORE