‘ಕೆಮ್ಮಿನ ಬೇರುಗಳು’ ಸ.ಜ. ನಾಗಲೋಟಮಠ ಅವರ ಅಧ್ಯಯನ ಕೃತಿಯಾಗಿದೆ. ಆರ್.ಎಲ್. ನರಸಿಂಹಯ್ಯ ಸ್ಮಾರಕ ಗ್ರಂಥಮಾಲೆ -11 ಅಡಿಯಲ್ಲಿ ಪ್ರಕಟಗೊಂಡಿರುತ್ತದೆ. ವೈದ್ಯಕೀಯ ನೆಲೆಯಿಂದ ಶೋಧಿಸಲ್ಪಟ್ಟಿರುವ ಈ ಕೃತಿಯಲ್ಲಿ ಕೆಮ್ಮಿನ ವಿವಿಧ ಪ್ರಕಾರಗಳನ್ನು ಕಾಣಬಹುದಾಗಿದೆ. ಹಾಗೂ ಅದರಿಂದ ಆಗುವಂತಹ ವಿಕಾರಗಳನ್ನು ಭಿನ್ನವಾದ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಕೆಮ್ಮು, ಸೀನು, ಕೆಮ್ಮಿನ ಪ್ರಕಾರಗಳು, ಮೂಗಿನೊಳಗೊಂದು ನಲ್ಲಿ, ಮೂಗಿನಲ್ಲಿ ಕೀವು ತುಂಬಿದ ಕಂಡಿಕೆಗಳು, ಧ್ವನಿಪೆಟ್ಟಿಗೆಯಲ್ಲಿ ಬಿರುಕು, ಶ್ವಾಸನಾಳ ಸೇರಿದ ಕೋಡಗ, ಗಾಳಿಯೊಳಗಿನಿಂದ ಮೈಯಲ್ಲಿ ಹೊಕ್ಕ ಗುದ್ದವ್ವ, ಶ್ವಾಸನಾಳದಲ್ಲೊಂದು ಸ್ಕ್ರೂಮೊಳೆ, ಶ್ವಾಸನಾಳದ ಬೆಂಕಿ ಪುಪ್ಪಸಕ್ಕೆ ಹರಡಿತು, ಉರಿಯುತ್ತಿರುವ ಪುಷ್ಪಸ, ಪುಪ್ಪುಸದಲ್ಲಿ ಕೀವು ತುಂಬಿದ ಕೊಳವೆಗಳು, ಕಫದಲ್ಲಿ ಹಲ್ಲಿ ಮರಿಗಳು, ಬಾಲಕರಲ್ಲಿ ಕ್ಷಯಂ ವಯಸ್ಕರಲ್ಲಿ ಕ್ಷಯ, ರಕ್ತಕಾರುವ ಪ್ರಪ್ರಸ, ಬಿರಿತ (ಛಿದ್ರ) ಮಹಾ ಅಪಧಮನಿಯ ಊತ (ಉಬ್ಬುವಿಕೆ), ಶ್ವಾಸನಾಳದಲ್ಲಿ ಸೇರಿದ ಏಡಿ, ಎದೆಗೂಡಿನೊಳಗೊಂದು ನೀರಿನ ಸೆಲೆ, ಪುಪ್ಪುಸದಲ್ಲೊಂದು ಬರಸಿನ ಚಂಡು ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿದೆ.
©2024 Book Brahma Private Limited.