ತಾಯಿ-ಮಗು ಕೃತಿಯಲ್ಲಿ ವೈದ್ಯ ಸಾಹಿತಿ ಡಾ. ಅನುಪಮಾ ನಿರಂಜನ ಅವರು ತಾಯಿ ಹಾಗೂ ಮಗುವಿನ ಆರೈಕೆ ಹಾಗೂ ವೈದ್ಯಕೀಯ ಸಲಹೆಯ ಮಾದರಿಯಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ತಾಯಿಯ ಆರೋಗ್ಯ ಹಾಗೂ ಮಗುವಿನ ಪೋಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸುವ ಈ ಗ್ರಂಥವು ಪ್ರತಿ ಕುಟುಂಬದ ’ಕೈಪಿಡಿ’.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE