ಪರಿಸರವು ಪ್ರತಿ ಜೀವಿಗೂ ನೀಡಿದ ಅತ್ಯಮೂಲ್ಯ ವರ ‘ದೃಷ್ಟಿ. ಯಾಕೆಂದರೆ ದೃಷ್ಟಿ ಇದ್ದರೆ ಮಾತ್ರ ಎಲ್ಲವನ್ನೂ ವೀಕ್ಷಿಸಲು ಸಾಧ್ಯ. ನಮ್ಮ ಜೀವನ ನಿರ್ವಹಣೆಗೆ ದೃಷ್ಟಿ ಅವಶ್ಯಕ. ಆದ್ದರಿಂದ ಕಣ್ಣುಗಳ ಬಗ್ಗೆ ಅಪಾರ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ, ಮತ್ತು ಅದು ಅನಿವಾರ್ಯವಾಗಿದೆ. ಆಳವಾದ ವೈದ್ಯಕೀಯ ಜ್ಞಾನ ಇಲ್ಲದಿದ್ದರೂ ಪ್ರತಿಯೊಬ್ಬರೂ ಕಣ್ಣಿನ ರಚನೆ, ಕಾರ್ಯನಿರ್ವಹಣೆ, ಸಾಮಾನ್ಯ ನೇತ್ರರೋಗಗಳು, ಕಣ್ಣಿನ ಮುನ್ನೆಚ್ಚರಿಕಾ ಸಂರಕ್ಷಣೆಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿರುವುದು ಉಪಯುಕ್ತವಾಗಿದೆ. ಪ್ರಮುಖ ನೇತ್ರತಜ್ಞ “ತಿರುಮಲಾಚಾರ್” ಅವರು ಕೃತಿ ಯ ಮೂಲಕ ಕಣ್ಣುಗಳನ್ನು ದೃಷ್ಟಿ ಕಳೆದುಕೊಳ್ಳದಂತೆ ಈ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.