ಮನುಷ್ಯನ ಜೀವನದಲ್ಲಿ ಆರೋಗ್ಯವೇ ಭಾಗ್ಯ. ಆದರೆ ಆ ಭಾಗ್ಯ ದುಬಾರಿಯಾಗದಿರಲು ಕೆಲವು ಪ್ರಾಥಮಿಕ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಿದೆ. ನಮ್ಮ ಸುತ್ತಮುತ್ತಲಿನ ಶುಚಿತ್ವ, ನಮ್ಮ ಆಹಾರ ಸೇವನೆಯಲ್ಲಿ ನಿಯಮಿತ ಪದ್ಧತಿ, ಗೃಹೋಪಯೋಗಿ ಬಳಕೆಯ ವಸ್ತುಗಳನ್ನು ಬಳಸುವ ಸಂದರ್ಭದೊಳಗಿನ ಎಚ್ಚರ, ಆಹಾರವನ್ನು ನೀಡುವ, ತಯಾರಿಸುವ, ಸಂದರ್ಭದಲ್ಲಿಯ ಸ್ವಚ್ಛತೆಯ ಎಚ್ಚರ, ಶುದ್ಧ ನೀರಿನ ಬಳಕೆ ಹೀಗೆ ಅನುದಿನದ ಬದುಕಿನಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕಾದ ಕೆಲವು ಸಾಮಾನ್ಯ ಸಂಗತಿಗಳ ಬಗ್ಗೆ ಈ ಕೃತಿ ತೆರೆದಿಡುತ್ತದೆ.
ಡಾ.ಎಚ್.ಎಸ್.ಪ್ರೇಮ ಅವರು ಆಹಾರ ಒಂದು ಸಂಸ್ಕೃತಿ ಕುರಿತು ಬರೆದ ಲೇಖನಗಳನ್ನು ಡಾ. ವಸುಂಧರಾ ಭೂಪತಿ ಸಂಪಾದಿಸಿದ್ದಾರೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE