ಲೇಖಕ ಆಸೂರಿ ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ ʻವಾಯುಮುದ್ರಾʼ. ಪುಸ್ತಕವು ಪ್ರತೀದಿನ ವಾಯುಮುದ್ರೆ ಮಾಡುವುದರ ಪ್ರಯೋಜನ ಹಾಗೂ ಅದರ ವೈಜ್ಞಾನಿಕ ಕಾರಣಗಳನ್ನು ಹೇಳುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಯೋಗಕ್ಕೆ ವಿಶೇಷವಾದ ಮಹತ್ವವನ್ನು ಕೊಡಲಾಗುತ್ತಿದೆ. ಆದರೆ ಕೆಲವೊಂದು ಯೋಗ ಮುದ್ರೆಗಳ ಬಗ್ಗೆ ಬಹುಪಾಲು ಜನರಲ್ಲಿ ತಿಳುವಳಿಕೆ ಇರುವುದಿಲ್ಲ. ಒಂದೊಂದು ಮುದ್ರೆಯೂ ಬೇರೆ ಬೇರೆ ರೀತಿಯಲ್ಲಿ ಮನುಷ್ಯನ ಆರೋಗ್ಯದ ಮೇಲೆ ಅಚ್ಚರಿಮೂಡಿಸುವಂತಹ ಆರೋಗ್ಯ ಲಾಭವನ್ನು ಕೊಡುತ್ತದೆ. ಹಾಗಾಗಿ ಇಲ್ಲಿ ಲೇಖಕರು ವಾಯುಮುದ್ರೆಯ ಕುರಿತು ಹೇಳುತ್ತಾರೆ. ಈ ಮುದ್ರೆಯನ್ನು ಮಾಡುವುದರಿಂದ ಕೀಲುಗಳ ನೋವು, ಆರ್ತ್ರ್ಯ್ಟಿಸ್ನಿಂದಾ, ಒದರುವಾಯು, ಪಾರ್ಕಿನ್ಸನ್ ಮುಂತಾದ ರೋಗಗಳಿಂದ ಬಳಲುವವರಿಗೆ ಪ್ರಯೋಜನಕಾರಿಯಾಗುತ್ತದೆ.
ಕೆ. ರಂಗರಾಜ ಅಯ್ಯಂಗಾರ್ ಅವರು ಬೆಂಗಳೂರಿನವರು. ಯೋಗ ಮುದ್ರಾ ಪ್ರಪಂಚ, ಮುದ್ರಾ ಪ್ರವೇಶ, ಮುದ್ರಾ ಯೋಗ ಸೇರಿದಂತೆ ಇತರೆ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ...
READ MORE