ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರು ಬರೆದ ಕೃತಿ-ನಿಮ್ಮ ಅಂಗಾಂಗಗಳ ಅರಿವು ನಿಮಗಿರಲಿ. ನಮ್ಮ ಅಂಗಾಂಗಗಳ ಕುರಿತು ಸೂಕ್ತ ಮಾಹಿತಿ ಹೊಂದಿದ್ದರೆ ಆರೋಗ್ಯವಾಗಿ ಹೇಗಿರಬೇಕು ಎಂಬುದರ ಅರಿವು ಮೂಡುತ್ತದೆ. ಯಾವ ಅಂಗ ಹೇಗೆ ಕೆಲಸ ಮಾಡುತ್ತದೆ? ಎಂಬುದರ ಕನಿಷ್ಟ ತಿಳಿವಳಿಕೆ ಅಗತ್ಯ. ಏಕೆಂದರೆ, ನಾವು ಸ್ವೀಕರಿಸುವ ಪ್ರತಿ ದಿನದ ಆಹಾರವೂ ನಮ್ಮ ಅಂಗಾಂಗಗಳ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವಶಾಲಿಯಾಗಿರುತ್ತದೆ. ಕಿವಿ-ಮೂಗು-ಗಂಟಲು ಇವುಗಳ ಮಧ್ಯೆ ಇರುವ ಅಂತರ್ ಸಂಬಂಧಗಳೇನು? ಹಲ್ಲಿನ ನರಗಳು ಹೇಗೆ ಮೆದುಳಿಗೆ ನೇರ ಸಂಪರ್ಕ ಪಡೆದಿರುತ್ತವೆ ಇತ್ಯಾದಿ ಅರಿವು ಇದ್ದರೆ ಅಂಗಾಂಗಗಳ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು. ಈ ಬಗ್ಗೆ ಮಾಹಿತಿ ನೀಡುವ ಕೃತಿ ಇದು.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE