‘ಮಕ್ಕಳ ಭವಿಷ್ಯ’ ಮಾರ್ಗಸೂಚಿ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಅವರ ಕೃತಿ. ಪ್ರಸಿದ್ಧ ಮನಃಶಾಸ್ತ್ರಜ್ಞರಾಗಿರುವ ಸಿ.ಆರ್. ಚಂದ್ರಶೇಖರ್ ಅವರು ಮಕ್ಕಳ ಲಾಲನೆ, ಪಾಲನೆ ಹೇಗೆ, ಹದಿಹರೆಯವನ್ನು ಅರ್ಥಮಾಡಿಕೊಂಡು, ನಿರ್ವಹಿಸುವುದು ಹೇಗೆ, ಓದು-ಅಧ್ಯಯನ ಮಾಡಲು ಉತ್ತಮ ವಿಧಾನ ಯಾವುದು, ವ್ಯಕ್ತಿತ್ವ ವಿಕಸನದ ಉತ್ತಮ ದಾರಿ ಯಾವುದು. ಶಾಲೆಗೆ ಹೋಗುವ ಭಯ, ಮಕ್ಕಳು ಹಠ ಮಾಡುವುದು, ಹಾಸಿಗೆ-ಬಟ್ಟೆಯಲ್ಲೇ ಮೂತ್ರ ಮಾಡುವುದು, ಅಪರಾಧ ಪ್ರವೃತ್ತಿ, ಪರೀಕ್ಷಾ ಭಯ, ಆಹಾರ ಸೇವನೆ ಮೊದಲಾದ ಸಮಸ್ಯೆಗಳಿಗೆ ಪರಿಹಾರೋಪಾಯ ಮಾರ್ಗಸೂಚಿಸನ್ನು ವೈಜ್ಞಾನಿಕ ವಿಧಾನದಲ್ಲಿ ವಿವರಿಸಿದ್ದಾರೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE