ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ನ ಯೋಗ ಶಿಕ್ಷಕರಾದ ನಾಗರಾಜ ಆರ್. ಸಾಲೋಳ್ಳಿಯವರು ಕಲಬುರಗಿಯ ಶಹಬಾದ ತಾಲೂಕಿನ ಮಾಲಗತ್ತಿ ಗ್ರಾಮದವರು. ಅಂತರಾಷ್ಟ್ರೀಯ ಯೋಗ ವಿಜೇತರಾದ ಇವರು ಯೋಗ ಸಾಧನೆಯಿಂದ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ೨೦೦೨ ರಿಂದ ಯೋಗಾಭ್ಯಾಸದಲ್ಲಿ ತೊಡಗಿ ಮುಂದೆ ಎಮ್. ಎಸ್ಸಿ. ಸ್ನಾತಕ ಪದವಿಯನ್ನು ಯೋಗದಲ್ಲಿಯೆ ಪಡೆದು, ನಂತರ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಹಾಗೂ ಸಾರ್ವಜನಿಕರಿಗಾಗಿ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ದತಿ ವಿಷಯಗಳ ಮೇಲೆ ೧೦೦ ಕ್ಕೂ ಹೆಚ್ಚಿನ ಉಚಿತ ತರಬೇತಿ ಶಿಬಿರಗಳನ್ನು, ಉಪನ್ಯಾಸಗಳನ್ನು ಹಾಗೂ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ, ಕಲಬುರಗಿಯ ಆಕಾಶವಾಣಿಯಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಬಿತ್ತರಗೊಂಡಿವೆ. “ಯೋಗ ಮತ್ತು ಮಕ್ಕಳ ಆರೋಗ್ಯ” ಕೃತಿ ರಚಿಸಿದ್ದಾರೆ. ಸಿದ್ಧ ಸಾಧಕ, ಯುವ ಪ್ರಶಸ್ತಿ, ಯೋಗಕಿರಣ, ಯೋಗ ಕುಸುಮ, ಯೋಗರತ್ನ, ಯೋಗ ಚೇತನ ಹಾಗೂ ಯೋಗ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.