ಮೂಳೆ ಕೀಲುಗಳು ನಮ್ಮ ದೇಹದ ಪ್ರಮುಖ ಆಧಾರ ಸ್ತಂಭಗಳು ಮತ್ತು ಚಲನಾ ಸೂತ್ರಗಳು. ಹೆಚ್ಚು ಕ್ರಿಯಾಶೀಲವಾಗಿರುವಷ್ಟೇ ಅಷ್ಟೇ ಅಪಾಯಕ್ಕೆ ತುತ್ತಾಗುವ ಸಂಭವವೂ ಹೆಚ್ಚಾಗಿರುತ್ತದೆ. ಅದರಲ್ಲೂ ಆಧುನಿಕ ಜಡ್ಡುಗಟ್ಟಿದ ಜೀವನಶೈಲಿಯಿಂದಾಗಿ, ಉದಾಸಿನದಿಂದಾಗಿ, ನಮ್ಮ ಜೀವನ ಕ್ರಮದಿಂದಾಗಿ, ಆಲಸ್ಯತನದಿಂದಾಗಿ ಮೂಳೆ, ಕೀಲುಗಳ ರೋಗ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಲೇಖಕರಾದ ಡಾ.ಎಸ್.ಎಸ್.ಪಾಟೀಲ್ ಮೂಳೆ-ಕೀಲುಗಳ ರಚನೆ, ಅವುಗಳ ಸಮಸ್ಯೆಗಳು, ಚಿಕಿತ್ಸೆಗಳು ಮತ್ತು ಜನಸಮುದಾಯವನ್ನು ದಾರಿತಪ್ಪಿಸುತ್ತಿರುವ ಮೂಢನಂಬಿಕೆಗಳು, ಇವುಗಳು ಮಾನವನ ಜೀವನದ ಮೇಲೆ ಬೀರುವ ಕೆಟ್ಟ ಪರಿಣಾಮದ ಕುರಿತು ವಿಷಾಧವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.