ಕೀಲು ಅಥವಾ ಜಾಯಿಂಟ್ ಉರಿಯೂತದಿಂದ ನೋವು ಮತ್ತು ಬಿಗಿತವಿರುತ್ತದೆ. ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆದರೆ ಸಹಾಯಕವಾಗುತ್ತದೆ. ಆದರೆ, ಸ್ಥಿತಿಯನ್ನು ಗುಣ ಮಾಡಲಾಗುವುದಿಲ್ಲ. ಕೀಲುನೋವು ಇದ್ದಾಗ ತಜ್ಞ ವೈದ್ಯರಿಂದ ರೋಗ ಪತ್ತೆಯಾಗಬೇಕಾಗುತ್ತದೆ. ಪ್ರಸ್ತುತ ಕೃತಿಯು ಸಂಧಿವಾತ ಕಾಯಿಲೆಯ ಕುರಿತು ಸಮಗ್ರ ಮಾಹಿತಿ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಎನ್. ವಿಶ್ವರೂಪಾಚಾರ್ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ.
’ವಿಶ್ವರೂಪ’ ಎಂಬ ಕಾವ್ಯನಾಮದಿಂದ ಬರೆಯುವ ಎನ್. ವಿಶ್ವರೂಪಾಚಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರದವರು. ತಂದೆ ಸಿ.ಎಂ. ನಂಜುಂಡಾಚಾರ್ ಮತ್ತು ತಾಯಿ ಲಿಂಗಮ್ಮ. ಆರಂಭಿಕ ಶಿಕ್ಷಣವನ್ನು ವಿಜಯಪುರ ಹಾಗೂ ರಾಮನಗರಗಳಲ್ಲಿ ಪಡೆದ ಅವರು ಮೈಸೂರು ಐ.ವಿ. ಸಂಜೆ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೆಲ್ತ್ ಸೂಪರ್‌ವೈಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 34 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ 13 ವರ್ಷ ಜನಾರೋಗ್ಯ ಬೋಧಕರಾಗಿ ಕೆಲಸ ಮಾಡಿರುವ ಅವರು ಹೈಸ್ಕೂಲ್‌ನಲ್ಲಿ ...
READ MORE