ಪರಿಸರ ಅನಾರೋಗ್ಯದಿಂದ ಕೂಡಿದ್ದರೆ ಜನರ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬೂದನ್ನು ಲೇಖಕ ಬಿ.ಜಿ.ಚಂದ್ರಶೇಖರ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ನಾವು ಆರೋಗ್ಯವಾಗಿರಲು ನಮ್ಮ ಸುತ್ತಲಿನ ಪರಿಸರ ಹೇಗಿರಬೇಕು ಎನ್ನುದನ್ನು ವಿವರಿಸುತ್ತದೆ. ಆರೋಗ್ಯಕರ ಪರಿಸರ, ವಿವಿಧ ರೀತಿಯ ಪರಿಸರಗಳು, ಅವುಗಳ ವ್ಯತ್ಯಯದಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ರಕ್ಷಣೆಗೆ ಬೇಕಾಗುವ ಆಹಾರ, ಪರಿಸರವನ್ನು ಹೇಗೆ ಇಟ್ಟುಕೊಳ್ಳಬೇಕು, ಅದರ ಸಂರಕ್ಷಣೆ ಹೇಗೆ, ಮಾನವ ಆರೋಗ್ಯದಲ್ಲಿ ಓಜೋನ್ ಪದರದ ಪಾತ್ರ ಮುಂತಾದ ಪ್ರಮುಖ ಸಂಗತಿಗಳ ಕುರಿತು ಲೇಖಕರು ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.
©2024 Book Brahma Private Limited.