ಮುಪ್ಪಿಗೆ ಹೆಜ್ಜೆ ಇಟ್ಟಾಗೆಲ್ಲ ಒಂದು ರೀತಿಯ ಅಭದ್ರತೆ ಕಾಡಲು ಶುರುವಾಗುತ್ತದೆ. ಅಲ್ಲಿ ಹಿರಿಯರಿಗೆ ಸಿಗುತ್ತಿದ್ದ ಗೌರವ ಪ್ರೀತ್ಯಾದರ ಇಂದು ಎಲ್ಲೋ ಕಳೆದು ಹೋದ ಭಾವ. ವಯೋವೃದ್ಧರಿಗೆ ತಾವು ಅಸಹಾಯಕರು, ಇನ್ನೊಬ್ಬರಿಗೆ ಹೊರೆ, ಕೂಳಿಗೆ ದಂಡ ಎಂಬಂತೆ ನೋಡುವ ಕಣ್ಣುಗಳು ಮತ್ತಷ್ಟು ಘಾಸಿಯನ್ನುಂಟು ಮಾಡುತ್ತದೆ. ಇವೆಲ್ಲವನ್ನು ಪರಿಗಣಿಸಿ ವೃದ್ಧರನ್ನು ತಾತ್ಸಾರ ಮಾಡದೆ ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ಸೂಚನೆಗಳನ್ನು ಲೇಖಕರು ಇಲ್ಲಿ ನೀಡಿದ್ದಾರೆ. ಅಂದಿನ ಕಾಲದ ಮಿತಿಯಲ್ಲಿ ನಮ್ಮನ್ನು ಸಾಕಿ ಬೆಳೆಸಿದವರೆಂಬ ಮನೋಭಾವನೆ ಬರುವಂತೆ ಮಾರ್ಗದರ್ಶನ ನೀಡುವ ಪುಸ್ತಕ ಇದಾಗಿದೆ. ಅಲ್ಲದೆ, ಮಾನಸಿಕವಾಗಿ ಕುಗ್ಗುವ ವೃದ್ಧರಿಗೆ ಸಮರ್ಥವಾಗಿ ಟೀಕೆ, ಅಭದ್ರತೆಯನ್ನು ನಿಭಾಯಿಸುವ ಸುಮಾರ್ಗವನ್ನು ಇಲ್ಲಿ ಕಾಣಬಹುದು. ವೃದ್ಧರ ಮನ ಗೆಲ್ಲುವುದೂ ಒಂದು ಸಾಧನೆ. ಈ ಪುಟ್ಟ ಪುಸ್ತಕದಲ್ಲಿ ಹಿರಿದಾದ ಸಂದೇಶವನ್ನು ಪ್ರಶ್ನೋತ್ತರ ರೂಪದಲ್ಲಿ ಸಂಗ್ರಹಿಸಿ ನೀಡಲಾಗಿದೆ.
©2024 Book Brahma Private Limited.