ಕ್ಯಾನ್ಸರ್ ಗೆ ಆನ್ಸರ್

Author : ಅಪರ್ಣ ಶ್ರೀವತ್ಸ

Pages 172

₹ 200.00




Year of Publication: 2024
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

‘ಕ್ಯಾನ್ಸರ್ ಗೆ ಆನ್ಸರ್’ ಅಪರ್ಣಾ ಶ್ರೀವತ್ಸ ಅವರ ಕೃತಿಯಾಗಿದೆ. ಇದಕ್ಕೆ ದೇವಿ ಪ್ರಸಾದ್ ಶೆಟ್ಟಿ ಅವರ ಬೆನ್ನುಡಿ ಬರಹವಿದೆ; ಭಾರತವು ಬೃಹತ್ ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆಯಾದರೂ ಭಾರತೀಯರ ಆರೋಗ್ಯ ಕ್ರಮೇಣ ಕ್ಷೀಣಿಸುತ್ತಿದೆ. ಹೃದ್ರೋಗ ಮತ್ತು ಕ್ಯಾನ್ಸರ್ ನಂತಹ ಸಂಕ್ರಾಮಿಕವಲ್ಲದ ಕಾಯಿಲೆಗಳು ಭಾರತೀಯರಲ್ಲಿ ಹೆಚ್ಚುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಕ್ಯಾನ್ಸ‌ರ್ ರೋಗಿಗಳ ಸಂಖ್ಯೆ ಹಾಗೂ ಕ್ಯಾನ್ಸರ್‌ನಿಂದ ಅಸುನೀಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಮುಂಬರುವ ದಶಕದಲ್ಲಿ ಭಾರತವು "ವಿಶ್ವದ ಕ್ಯಾನ್ಸರ್ ರಾಜಧಾನಿ" ಆಗಲಿದೆ. ಎಂಬ ನಿರೀಕ್ಷೆಯಿದೆ. ಕ್ಯಾನ್ಸರ್ ರೋಗ ನಿರ್ಣಯವು ರೋಗಿಗಳಲ್ಲಿ ಮತ್ತು ಅವರ ಕುಟುಂಬಗಳಲ್ಲಿ ಸಾವಿನ ಭಯವನ್ನು ಉಂಟು ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಚಿಕಿತ್ಸೆಗಳಿಂದ ಹಲವಾರು ಆರಂಭಿಕ ಹಂತದ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣ ಪಡಿಸಬಹುದಾಗಿದೆ. ಅಷ್ಟೇ ಅಲ್ಲದೆ ಕೊನೆಯ ಹಂತಗಳ ಕ್ಯಾನ್ಸರ್ ಅನ್ನು ಸಹ ಇಮ್ಯುನೋಥೆರಪಿ, ಟಾರ್ಗೆಟ್ ಥೆರಫಿಯಂತಹ ನೂತನ ಚಿಕಿತ್ಸೆಗಳಿಂದ ನಿಯಂತ್ರಿಸಬಹುದಾಗಿದೆ. ರೋಗಿಗಳ ಜೀವಿತಾವಧಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ರೋಗಿಯು ಲವಲವಿಕೆಯಿಂದ ಜೀವನ ನಡೆಸುವಂತೆ ಮಾಡಬಹುದಾಗಿದೆ. ಹಾಗೆಯೇ ಆರೋಗ್ಯವಂತರಲ್ಲಿ ಕೆಲವು ಸರಳ ಪರೀಕ್ಷೆಗಳ ಮೂಲಕ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಬಹುದು. ಮತ್ತೆ ಕೆಲವು ಕ್ಯಾನ್ಸರ್‌ಗಳನ್ನು ಲಸಿಕೆಗಳಿಂದ ಹಾಗೂ ಜೀವನ ಶೈಲಿಯ ಬದಲಾವಣೆಗಳಿಂದ ತಡೆಗಟ್ಟಲೂಬಹುದು.ಪ್ರಾದೇಶಿಕ ಭಾಷೆಗಳಲ್ಲಿ ಕ್ಯಾನ್ಸರ್ ಬಗೆಗಿನ, ತಜ್ಞ ವೈದ್ಯರು ಬರೆದ ವೈಜ್ಞಾನಿಕ ಮಾಹಿತಿ ಅಪರೂಪ. ಈ ಪುಸ್ತಕ "ಕ್ಯಾನ್ಸರ್‌ಗೆ ಆನ್ಸರ್' ಕ್ಯಾನ್ಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಳ ಕನ್ನಡದಲ್ಲಿ ಸುಲಲಿತವಾಗಿ ಸಾಮಾನ್ಯ ಜನರಿಗೆ ತಲುಪಿಸುವಲ್ಲಿಈ ಪುಸ್ತಕ ಯಶಸ್ವಿಯಾಗಿದೆ.

Related Books