ಡಾ. ಎಚ್.ಡಿ. ಚಂದ್ರಪ್ಪಗೌಡ ಅವರು ಬರೆದ ಕೃತಿ- ವೈದ್ಯ ಲೋಕದ ಕೌತುಕಗಳು. ವೈದ್ಯ ಲೋಕದಲ್ಲಿ ವಿಜ್ಞಾನ-ತಂತ್ರಜ್ಞಾನ ಎರಡೂ ಬೆಳೆದಿದೆ. ಅನೇಕ ಮಹನೀಯರು ತಮ್ಮ ನಿರಂತರ ಸಂಶೋಧನೆ, ಹಾಗೂ ಅನ್ವಯದ ಮೂಲಕ ಕೊಡುಗೆ ನೀಡಿದ್ದಾರೆ. ಕೆಲವರು ಆವಿಷ್ಕಾರ ಮಾಡುತ್ತಿದ್ದಾರೆ. ಇದರ ಪರಿಣಾಮ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ರೋಗಗಳು ಇಲ್ಲವಾಗಿವೆ. ಇಷ್ಟಾದರೂ ಕೆಲವೊಂದು ಸಂಶೋಧನೆಗಳು ಯಾವ್ಯಾವದೋ ಕುಮ್ಮಕ್ಕಿನಿಂದ ವಿರೋಧಕ್ಕೂ ಒಳಗಾಗುತ್ತಿವೆ. ಇಂತಹ ಸನ್ನಿವೇಶದಿಂದ ಸ್ಥಗಿತಗೊಂಡಿದ್ದ ಸಂಶೋಧನೆಗಳು ಅವರ ಮರಣಾನಂತರ ಚಾಲನೆ ಪಡೆದುಕೊಂಡಿವೆ. ಇಂತಹ ಅನೇಕ ವೈದ್ಯಕೀಯ ಕಸರತ್ತುಗಳಿಗೆ ಕಾರಣವಾದ ಶ್ರಮವನ್ನು ತಿಳಿಯಲು ಈ ಕೃತಿ ಉತ್ತಮವಾಗಿದೆ.
ಡಾ. ಚಂದ್ರಪ್ಪಗೌಡ ಎಚ್.ಡಿ ಅವರು 29-6- 1929 ಹೊಳೆಗದ್ದೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ವೈಜ್ಞಾನಿಕ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಎಚ್.ಡಿ. ಚಂದ್ರಪ್ಪಗೌಡ ಅವರು ಆರೋಗ್ಯದ ಕುರಿತಾಗಿ, ಮತ್ತು ಸೃಜನಶೀಲವಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಲೋಕದ ಕೌತುಕಗಳು, ಕುಸಿದುಬೀಳದಂತೆ ತಡೆಯುವುದು ಹೇಗೆ, ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕುವೆಂಪು ವೈದ್ಯ ಸಾಹಿತ್ಯ ಪುರಸ್ಕಾರ, ದೇಜಗೌ ಪ್ರತಿಷ್ಠಾನದ ವಿಶ್ವಮಾನವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಚ್.ಡಿ.ಚಂದ್ರಪ್ಪಗೌಡ ಅವರ ಮುಖ್ಯ ಕೃತಿಗಳು : ಜೋಸೆಫ್ ಆಸ್ಟರ್, ವೈದ್ಯವಿಜ್ಞಾನ ಸಾಧಕರು, ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ...
READ MORE