ಡಾ. ವಸಂತ ಅ. ಕುಲಕರ್ಣಿ ಅವರ ಕೃತಿ-ದೇಹ ದ್ರವಗಳು. ಶಾರೀರಕವಾಗಿ ಎಷ್ಟೆಲ್ಲಾ ಸಂಶೋಧನೆಗಳು ನಡೆದರೂ ದೇಹ ಎಂಬುದು ಇಂದಿಗೂ ನಿಗೂಢ. ಅದು ತನ್ನ ರಚನೆಯಲ್ಲಿ, ಕಾರ್ಯ ಚಟುವಟಿಕೆಯಲ್ಲಿ ರಹಸ್ಯತಮವಾದ ಹತ್ತು ಹಲವು ಅಂಶಗಳನ್ನು ತೋರಿಸುತ್ತಲೇ ಇದೆ. ಕಾಯಿಲೆಗಳಿಂದ ರಕ್ಷಣೆ ಪಡೆಯುವ ತನ್ನದೇ ಆದ ತಂತ್ರಗಳು, ವ್ಯೂಹಗಳು, ಬಿಳಿ ರಕ್ತ ಕಣಗಳ ಸೈನ್ಯ ಇತ್ಯಾದಿ. ಹೀಗೆಯೇ, ದೇಹದ ದ್ರವಗಳು ಬಹುತೇಕ ಕಾರ್ಯಗಳನ್ನು ನಿರ್ವಹಿಸುವ ಮೂಲಕ ದೇಹವನ್ನು ಆರೋಗ್ಯ ಸ್ಥಿತಿಯಲ್ಲಿರಿಸುತ್ತವೆ. ಇಂತಹ ದ್ರವಗಳ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ. ವೈದ್ಯಕೀಯ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ಆಕರ ಗ್ರಂಥವಿದು.
ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ...
READ MORE