‘ಧನ್ಯವಾದಗಳು ಗಿಲ್ಲನ್ ಬ್ಯಾರಿ ಸಿಂಡ್ರೋಮ್’ ಒಂದು ರೋಗಾನುಭವ ಮಲಯಾಳಂನ ಲೇಖಕ ರಾಸಿತ್ ಅಶೋಕನ್ ಅವರ ಕೃತಿಯನ್ನು ಕೆ. ಪ್ರಭಾಕರನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಲೇಖಕಿ ಡಾ. ವಸುಂಧರಾ ಭೂಪತಿ ಅವರ ಮುನ್ನುಡಿ-ಬೆನ್ನುಡಿಗಳಿವೆ. ಕೃತಿಯ ಕುರಿತು ತಿಳಿಸುತ್ತಾ ‘ಬರಹ ಎಂಬುದು ಪ್ರತಿ ಬರಹಗಾರನ ಸಂತನದ, ಸೃಜನಶೀಲತೆಯ ಅಭಿವ್ಯಕ್ತಿ, ಆರೋಗ್ಯ ಕ್ಷೀಣಿಸುತ್ತಾ ಕ್ಷೀಣಿಸುತ್ತಾ ದೇಹ ತನ್ನ ಸ್ವಾಧೀನತೆ ಕಳೆದುಕೊಳ್ಳುವಾಗ ನೋವು, ದುಃಖದ ಸನ್ನಿವೇಶದಲ್ಲೂ ಅವಿನಾಶಿ ಅಕ್ಷರಗಳ ಪಾರಿಜಾತದ ಗಂಧ ಹರಡಿ ಆಹ್ಲಾದಗೊಸುತ್ತದೆ. ರಾಸಿತ್ ಕಾಯಿಲೆಗೆ ಕಾರಣವೇನಿರಬಹುದೆಂದು ತನ್ನನ್ನು ಹಳಿದುಕೊಳ್ಳುವುದಾಗಲೀ ಇತರರನ್ನು ದೂಷಿಸುವುದಾಗಲೀ ಮಾಡದೆ ನಿರ್ಲಿಪ್ತ ರೋಗಿಯಂತೆ ಎಲ್ಲವನ್ನೂ ಅನುಭವಿಸಿ ಬರಹ ರೂಪಕ್ಕಿಳಿಸುವ ಕಾರ್ಯದಲ್ಲಿ ಪ್ರಾಂಜಲವಾಗಿ ತೊಡಗುತ್ತಾರೆ.
ಯೌವ್ವನದ ಸದೃಢತೆ, ದುಡಿಮೆ, ಸೌಂದರ್ಯಾನುಭೂತಿಯನ್ನು ಉನ್ಮತ್ತನಂತೆ ಆಸ್ವಾದಿಸುವ ಸಮಯದಲ್ಲಿ ಧುತ್ತನೆ ಎರಗಿ ಜಡತ್ವವನ್ನು ತಂದೊಡ್ಡುವ "ಗಿಲ್ಲನ್ ಬ್ಯಾಲಿ ಸಿಂಡ್ರೋಮ್" ನ್ನು ದಿಟ್ಟವಾಗಿ ಎದುರಿಸಿ ಸಹಜ ಜೀವನಕ್ಕೆ ವಾಪಸ್ಸಾದ ಬಗೆ ಕಲ್ಪನೆಗೂ ಮೀರಿದ್ದು, ತಾವು ಅನುಭವಿಸಿದ ಪ್ರತಿ ಹಂತವನ್ನು ಅರಿವಿನ ಅಕ್ಷರಗಳನ್ನು ಹಣಿದು ಹಾರವಾಗಿಸಿದ್ದಾರೆ. ಅಸಾಧ್ಯವಾದುದನ್ನು ಅನುಭವಿಸಿದವರಿಗೆ ಅದನ್ನು ಹೇಳಕೊಳ್ಳುವುದು ಸುಲಭವಲ್ಲ, ಆದರೆ, ಲೇಖಕ ರಾಸಿತ್ ಆಸ್ಪತ್ರೆಯ ಐಸಿಯುವಿನಲ್ಲಿ ಇಂಜೆಕ್ಷನ್, ಅಕ್ಟಿಜನ್, ಮಾಸ್ಕ್, ವೆಂಟಿಲೇಟರ್, ಟ್ರಿಕಿಯೊಸ್ಟಮಿ ಮುಂತಾದವುಗಳನ್ನು ಸರಳವಾಗಿ, ಸುಲಲಿತವಾಗಿ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಮಾತ್ರ ಪರಿಚಯವಿರುವ ಪದಗಳನ್ನು ಅರ್ಥಸಹಿತವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ.
“ಗಿಲ್ಲನ್ ಬ್ಯಾರಿ ಸಿಂಡ್ರೋಮ್" ಕೃತಿಯ ನಿರೂಪಣಾ ಶೈಲಿ ತಲಸ್ಪರ್ಶಿಯಾಗಿದೆ. ಮಲಯಾಳಂ ಭಾಷೆಯ ಸೌಂದರ್ಯವನ್ನು ಕನ್ನಡಕ್ಕೆ ಇಸುವಾಗ ಯಾವುದೇ ರೀತಿಯ ಮುಕ್ಕಾಗದಂತೆ, ಭಾವಕ್ಕೆ ಚ್ಯುತಿಯಾಗದಂತ ಲೇಖಕ, ಅನುವಾದಕ ಕೆ. ಪ್ರಭಾಕರನ್ ಎಚ್ಚರ ವಹಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ವೃತ್ತಿಯಿಂದ ಎಂಜಿನಿಯರ್ ಆಗಿರುವ ಕೆ. ಪ್ರಭಾಕರನ್ ಅವರು ಮೆಸ್ಕಾಮ್ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...
READ MORE