ಪ್ರಸ್ತುತ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ತಮ್ಮ ವಿರಾಟ್ ರೂಪ ತಾಳುತ್ತಿರುವ ಈ ಸಂದರ್ಭದಲ್ಲಿ ವೈದ್ಯಲೋಕದ ಮಾಹಿತಿಗಳು, ಜಾಗೃತಿ ವಿಷಯಗಳು ಜನಸಾಮಾನ್ಯರಿಗೆ ಬಹಳ ಸುಲಭವಾಗಿ ದೊರಕುತ್ತದೆ. ಆದರೆ ಜನಸಾಮಾನ್ಯರಿಗೆ ದೊರಕಿದ ಮಾಹಿತಿ ಅವರಲ್ಲಿ ಹಲವಾರು ಗೊಂದಲಗಳನ್ನು ಉಂಟುಮಾಡುತ್ತವೆ. ಸೂಕ್ತ ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದ ಜನ, ಅನಗತ್ಯ ಆತಂಕ, ಗೊಂದಲ, ಭಯ ಸೃಷ್ಟಿಸುವಂತಹ ಆರೋಗ್ಯ ಮಿಥ್ಯೆ ಮಾಹಿತಿಗಳನ್ನು , ಯಾವುದೇ ಮುಲಾಜಿ ಇಲ್ಲದೆ ಸಿಕ್ಕಿದ ಮಾಹಿತಿ ಎಲ್ಲವೂ ಸತ್ಯವೆಂದು ನಂಬಿ ಸುಲಭವಾಗಿ ಮೋಸ ಹೋಗುತ್ತಾರೆ. ಈ ನಿಟ್ಟಿನಲ್ಲಿ ಆರೋಗ್ಯ ಮಾಹಿತಿಯನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು, ಯಾವುದು ಅಧಿಕೃತ ಮಾಹಿತಿ , ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು”ಲೇಖಕ ಎನ್. ಗೋಪಾಲಕೃಷ್ಣ”ರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
ವಿಜ್ಞಾನ ಮತ್ತು ಆರೋಗ್ಯ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದವರಲ್ಲಿ ಪ್ರಮುಖರು ಎನ್. ಗೋಪಾಲಕೃಷ್ಣ. ಅನುವಾದದಲ್ಲೂ ಕೃಷಿ ಸಾಧಿಸಿದ್ದಾರೆ. ಆರೋಗ್ಯ ಸಂವಹನ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡದಲ್ಲಿ ‘ಸಂಕ್ಷಿಪ್ತ ಕೃಷಿ-ಪರಿಸರ ಸಚಿತ್ರ ಶಬ್ದಾರ್ಥ ಕೋಶ, ನಗುವಿನಿಂದ ಆರೋಗ್ಯವೃದ್ಧಿ, ಆರೋಗ್ಯ ಮಾಹಿತಿಯ ಸದುಪಯೋಗ, ಮೂಡ್ ಸರಿಪಡಿಸುವ ಥೆರಪಿ, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?, ಆಪ್ತಸಲಹೆ, ಆಧುನಿಕ ಜೀವನದಲ್ಲಿ ಆರೋಗ್ಯ ಸಂರಕ್ಷಣೆ ಹೇಗೆ? ಆರೋಗ್ಯ ದರ್ಶನ, ಮಿದುಳಿನ ಶಕ್ತಿ, ವಿಶ್ವದಿನ ವಿಶೇಷ ದಿನ, ಆರೋಗ್ಯ ಜ್ಞಾನ ನಿಮಗೇಕೆ ಬೇಕು? ನಿವೃತ್ತ ಜೀವನಕ್ಕೆ ಸಿದ್ಧತೆ ಹೇಗೆ?, ನೋವಿನ ಮಂಡಿ, ಆತ್ಮಹತ್ಯೆ: ...
READ MORE