ಏಡ್ಸ್ ರೋಗವು ಪ್ರಸ್ತುತ ವಿಶ್ವದ ಮಹಾ ಹೆಮ್ಮಾರಿಯಾಗಿ ಬೆಳೆಯುತ್ತಿದೆ. ಅಮಾಯಕ ಮತ್ತು ಅಸಹಾಯಕ ಮಹಿಳೆಯರು, ಮಕ್ಕಳನ್ನು ನಿಷ್ಕಾರುಣವಾಗಿ ಬಾಧಿಸುವಂತೆ ಈ ಏಡ್ಸ್ ರೋಗವು ಮಾಡುತ್ತದೆ. ಏಡ್ಸ್ ಕಾಯಿಲೆಯ ಬಗೆಗಿನ ಕಳಂಕಿತ ಭಾವನೆ, ಜನರ ತಾರತಮ್ಯ ಧೋರಣೆಗಳು ಈ ರೋಗಗ್ರಸ್ಥರನ್ನು ಮತ್ತಷ್ಟೂ ಕುಗ್ಗುವಂತೆ ಮಾಡಿದೆ. ಬಡ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುತ್ತಿರುವ ಈ ಘೋರ ರೋಗದ ಹುಟ್ಟು ಹಿನ್ನೆಲೆ ಉಗಮ, ಪ್ರಸರಣ, ಲಕ್ಷಣ ಮತ್ತು ಅಪಕಲ್ಪನೆಗಳು ಭ್ರಾಂತು ದೂರ ಮಾಡುವ ಒಂದು ಸಮಗ್ರ ಕೆಲಸವನ್ನು ಲೇಖಕರ ಡಾ|| ಹೆಚ್.ಎಸ್. ಮೋಹನ್ ರವರು ಈ ಕೃತಿಯ ಮೂಲಕ ಮಾಡಿದ್ದಾರೆ.
ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ. ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು. ...
READ MORE