ಈ ಕೃತಿಯಲ್ಲಿ ಹೋಮಿಯೋಪತಿ ಚಿಕಿತ್ಸಾ ವಿಧಾನದ ಒಳಹೊರಗನ್ನು, ಇದರ ಸತ್ವವನ್ನು, ಮಹತ್ವವನ್ನು ಲೇಖಕರಾದ ಬಿ.ಟಿ. ರುದ್ರೇಶ್‌ರವರು ಸಮರ್ಥವಾಗಿ ವಿವರಿಸಿದ್ದಾರೆ. ಜೈವಿಕ ಅನುವಂಶೀಯ ಅಂಶಗಳ ಪರಿಸರ, ಅಹಾರ, ವ್ಯಾಯಾಮ, ಮಾನಸಿಕ ಒತ್ತಡಗಳು, ಬ್ಯಾಕ್ಟೀರಿಯಾ ವೈರಸ್ ಪಂಗಸ್‌ನಂತಹ ರೋಗಕಾರಕಗಳ ವಿಷಯಗಳ ಬಗ್ಗೆಯೂ ಈ ಕೃತಿಯಲ್ಲಿ ವಿವರಿಸಲಾಗಿದೆ. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ದುಬಾರಿ ಉದ್ಯಮವಾಗಿ ಬದಲಾವಣೆ ಹೊಂದುತ್ತಿರುವ ಪ್ರಸ್ತುತ ಸಂದರ್ಭದಲ್ಲಿ , ಬಡವರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸುವ ಹೋಮಿಯೋಪತಿಯ ಅಗತ್ಯತೆತೆಯ ಕುರಿತ ಮಾಹಿತಿಯನ್ನು ಲೇಖಕ ಬಿ.ಟಿ.ರುದ್ರೇಶ್ ಅವರು ಮಾಹಿತಿಯನ್ನು ಒದಗಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್. ಬೆಂಗಳೂರಿನಲ್ಲಿ ವಾಸವಿದ್ದಾರೆ. ಕೃತಿಗಳು: ಬದುಕು-ಬೆಳಕು (ಅನುಭವ ಕಥನ), ಸಾಧನೆಯೇ ಬದುಕು (ವೈದ್ಯ ಜೀವನ ಕಥನ) ...
READ MORE