‘ಆನುವಂಶೀಯ ಕಾಯಿಲೆಗಳು’ ಎಂಬುದು ಲೇಖಕಿ ಎಸ್.ಎಸ್. ಮಾಲಿನಿ ಅವರ ಕೃತಿ. ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖವಾಗಿ ಆತನ ಆನುವಂಶಿಯತೆ ಹಾಗೂ ಆತ ಬೆಳೆದು ಬಂದ ಪರಿಸರ ಮುಖ್ಯ ಕಾರಣವಾಗುತ್ತದೆ. ಪರಿಸರವೇ ಪ್ರಮುಖ ಎಂಬುದು ಹಲವು ಅಧ್ಯಯನಗಳ ವಾದವಾದರೆ, ಆನುವಂಶೀಯತೆಯೇ ಪ್ರಮುಖ ಕಾರಣ ಎಂಬುದು ಮತ್ತೇ ಹಲವು ಅಧ್ಯಯನಗಳ ಪ್ರತಿವಾದವಾಗಿದೆ. ಆದರೆ, ವ್ಯಕ್ತಿಯ ಬೆಳವಣಿಗೆ ವಿಶೇಷವಾಗಿ ಆತನಿಗೆ ಬರುವ ಕಾಯಿಲೆಗಳ ಪೈಕಿ ಆನುವಂಶೀಯತೆಯೇ ಪ್ರಮುಖ ಕಾರಣ, ಆತನಿಗೆ ಬರುವ ರೋಗಗಳು ಸಹ ಆತನ ಅನುವಂಶೀಯತೆಯನ್ನು ಅವಲಂಬಿಸಿರುತ್ತದೆ. ಆ ರೋಗಗಳು ಯಾವುವು...? ಎಂಬಿತ್ಯಾದಿ ವಿವರಗಳುಳ್ಳ ಕೃತಿ ಇದು.
ಲೇಖಕಿ, ಪ್ರಾಧ್ಯಾಪಕಿ ಡಾ. ಎಸ್.ಎಸ್. ಮಾಲಿನಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮಾನವ ತಳಿಶಾಸ್ತ್ರ ಪ್ರಯೋಗಾಲಯ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಂಶೀಯ ಕಾಯಿಲೆಗಳು, ಕ್ಯಾನ್ಸರ್ ಇವರ ಪ್ರಮುಖ ಕೃತಿಗಳು. ...
READ MORE