ಲೇಖಕಿ ಡಾ. ಎಂ. ವಸುಂಧರಾ ಅವರ ಕೃತಿ-ಸೌಂದರ್ಯವರ್ಧಕ ಗಿಡಮೂಲಿಕೆಗಳು. ಮಾರುಕಟ್ಟೆಯಲ್ಲಿಯ ಬಹಳಷ್ಟು ಗಿಡಮೂಲಿಕೆಗಳು ಸೌಂದರ್ಯವರ್ಧಕಗಳಾಗಿವೆ. ಆದರೆ, ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಸಾಂಪ್ರದಾಯಿಕ ಸೌಂದರ್ಯವರ್ಧಕ ಗಿಡಮೂಲಿಕೆಗಳನ್ನು ಕಡೆಗಣಿಸಲಾಗುತ್ತಿದೆ. ರಾಸಾಯನಿಕ ವಸ್ತುಗಳ ಮಿಶ್ರಣದೊಂದಿಗೆ ಜಾಹೀರಾತುಗಳ ಮೂಲಕ ದೊಡ್ಡ ಸುದ್ದಿ ಮಾಡುವ ಕಂಪನಿಗಳ ಸೌಂದರ್ಯವರ್ಧಕಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ. ಇಂತಹ ಸಂದಿಗ್ಧತೆಯ ಸನ್ನಿವೇಶದಲ್ಲಿ ಈ ಕೃತಿಯು ಸೌಂದರ್ಯವರ್ಧಕಗಳ ಕುರಿತು ಉಪಯುಕ್ತ ಮಾಹಿತಿ ನೀಡುವ ಕೃತಿ ಇದು.
ವಿಜ್ಞಾನ, ಆರ್ಯುವೇದ ಕುರಿತು ಹಲವು ಕೃತಿಗಳನ್ನು ರಚಿಸಿರುವ ಲೇಖಕಿ ವಸುಂಧರಾ ಎಂ. 1957 ಮೇ 20ರಂದು ಜನಿಸಿದರು. ಮಂಡ್ಯ ಇವರ ಹುಟ್ಟೂರು. ತಾಯಿ ಸಾವಿತ್ರಮ್ಮ. ತಂದೆ ಮರಿಯಪ್ಪ. ವಿಜ್ಞಾನ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಆರ್ಯುವೇದ, ಗಿಡಮೂಲಿಕೆಗಳ ಕುರಿತು ಅಧ್ಯಯನದಲ್ಲಿ ನಿರತರಾಗಿದ್ದ ಇವರು ಇದಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಸೌಂದರ್ಯವರ್ಧಕ ಗಿಡಮೂಲಿಕೆಗಳು, ಮನೆಯಂಗಳದಲ್ಲಿ ಔಷಧಿ, ಔಷಧಿ ಮತ್ತು ಸುಗಮಧ ಸಸ್ಯಗಳ ಕೈಪಿಡಿ, ಔಷಧಿ ಬೆಳೆಗಳ ಬೇಸಾಯ ಕ್ರಮಗಳು, ಔಷಧಿ ಬೆಳೆಗಳ ತಾಂತ್ರಿಕ ತರಬೇತಿ ಕೈಪಿಡಿ, ಔಷಧಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು ಮತ್ತು ...
READ MORE