ಯಾವ ಯಾವ ಕಾಯಿಲೆಗೆ ಯಾವ ಪರೀಕ್ಷೆಗಳ ಅವಶ್ಯಕತೆ ಇದೆ ಎಂಬುದನ್ನು ಈ ಕೃತಿ ಸೂಕ್ತ ಮಾಹಿತಿಯೊಂದಿಗೆ ತಿಳಿಸುತ್ತದೆ. ದೇಹದಲ್ಲಿ ರಕ್ತಕಣಗಳು, ಪ್ಲೇಟೆಲೆಟ್ಸ್‌ಗಳು ಹಾಗೂ ಕೆಲವು ರಾಸಾಯನಿಕ ಅಂಶಗಳು ಯಾವ ಪ್ರಮಾಣದಲ್ಲಿ ಇರಬೇಕು ಮತ್ತು ಏರುಪೇರಾದರೆ ಏನೆಲ್ಲಾ ತೊಂದರೆಗಳುಂಟಾಗಬಹುದು ಎಂಬುದರ ಬಗ್ಗೆ ವಿವರವಿದೆ.
ಹೃದಯ, ಯಕೃತ್, ಮೂತ್ರಪಿಂಡ ಮುಂತಾದ ಅಂಗಗಳ ಕಾರ್ಯಕ್ಷಮತೆಗೆ ಯಾವ ಪರೀಕ್ಷೆ ಮಾಡಿಸಬೇಕು? ಮೂಳೆಗಳ ಸಾಂದ್ರತೆ ಅರಿಯುವ ಪರೀಕ್ಷೆ, ಎದೆಗೂಡಿನ ರಹಸ್ಯ ಅರಿಯಲು, ಉದರದ ಮಾಯಾ ಪೆಟ್ಟಿಗೆ ವಿಷಯ, ಗರ್ಭಕೋಶದ ಕ್ಯಾನ್ಸರ್ ಪತ್ತೆಗೆ ತೀರಾ ಸರಳವಾದ ಪ್ಯಾಪ್ಸ್ಮಿಯರ್ ಪರೀಕ್ಷೆಗಳಲ್ಲದೇ ಅನೇಕ ವಿಧದ ಕಾಯಿಲೆಗಳ ಪತ್ತೆಗೆ ನೆರವಾಗುವ ಪರೀಕ್ಷೆಗಳ ಬಗ್ಗೆ ವಿವರಣೆ ಇದೆ.
ನಾ. ಸೋಮೇಶ್ವರ ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE