ಸಾಹಿತಿ ಪಾ.ಲ. ಸುಬ್ರಹ್ಮಣ್ಯ ಅವರು ರಚಿಸಿದ ಕೃತಿ ‘ಮಾನವ ಶರೀರ ಯಂತ್ರ; ಪ್ರಾಣಾಯಾಮ-ತಂತ್ರ. ಮಾನವ ಶರೀರವನ್ನು ಯಂತ್ರಕ್ಕೆ ಹೋಲಿಸಿರುವ ಲೇಖಕರು, ಅದನ್ನು ಸದೃಢವಾಗಿಸಲು ಪ್ರಾಣಾಯಾಮ ಅಗತ್ಯ. ಈ ಪ್ರಾಣಾಯಾಮವು ತಂತ್ರದ ಹಾಗೆ ಕೆಲಸ ಮಾಡುತ್ತದೆ. ಪ್ರಾಣಾಯಾಮವು ಶರೀರದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ. ಇಂತಹ ಸಂಗತಿಗಳನ್ನು ಒಳಗೊಂಡಿದ್ದು, ದೇಹಕ್ಕೆ ಯೋಗದ ಅಗತ್ಯವನ್ನು ಪ್ರತಿಪಾದಿಸುತ್ತದೆ.
ಪಾ. ಲ. ಸುಬ್ರಹ್ಮಣ್ಯ ಮೂಲತಃ ತಮಿಳುನಾಡಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇವರ ಗಾಂಧೀಜಿಗೊಂದು ಪತ್ರ ಹಾಗೂ ಇತರ ಪದ್ಯಗಳು 2001 ರಲ್ಲಿ ಪ್ರಕಟವಾಗಿರುತ್ತದೆ. ಹೊನ್ನಾವರ ಕಾಲೇಜಿನಲ್ಲಿ ಮೂರು ವರ್ಷ ಕಾಲ ಸೇವೆ ನೀಡಿ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. 1972 ರಿಂದ ಗದುಗಿನ ಜ್ಯೂನಿಯರ್ ಕಾಲೇಜೊಂದರಲ್ಲಿ ಪ್ರಾಚಾರ್ಯರಾಗಿ ನಿವೃತ್ತರು. ಕೃತಿಗಳು: ವಿಮರ್ಶಾ ಲೇಖನಗಳು; ಪ್ರಾರ್ಥನೆ, ಮೌನಿ, ನಲವತ್ತು ನೆರಳು, ...
READ MORE