ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವಂತೆ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿಗಳನ್ನು ವಿವರಿಸಲಾಗಿದೆ. ವೈದ್ಯಕೀಯ ವಿಜ್ಞಾನದ ಬೆಳವಣಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಕುತೂಹಲಕಾರಿ ಘಟನೆಗಳು, ಅನುಭವಗಳು ಮತ್ತು ದೃಷ್ಟಾಂತಗಳನ್ನು ಲೇಖಕರು ನೀಡಿದ್ದಾರೆ. ಸ್ವತಃ ವೈದ್ಯರಾಗಿರುವ ಲೇಖಕರು ಡಾಕ್ಟರ್ ಮತ್ತು ನರ್ಸ್‌ಗಳಿಂದ ನಡೆಯುವ ಅಪಾಯಗಳು, ರೋಗಿಗಳ ಸ್ಥಿತಿ ಕಂಡು ಲೇಖಕರು ಮಾಡಿದ ಸಹಾಯಗಳ ಬಗ್ಗೆ ವಿವರಿಸಿದ್ದಾರೆ. ಲೇಖಕರಿಗೆ ತಮ್ಮ ವೃತ್ತಿ ಜೀವನದಲ್ಲಿ ಎದುರಾದ ತೊಂದರೆಗಳು, ಅದನ್ನು ಚಾಣಾಕ್ಷತನದಿಂದ ಬಗೆಹರಿಸಿಕೊಂಡ ಬಗೆ, ವೈದ್ಯಕೀಯ ಸಾಧನೆಗಳು ಸಾಲದೆ ಇದ್ದಾಗ ತಾವೇ ಶೋಧಿಸಿ ತಯಾರಿಸಿದ ಸಂದರ್ಭದ ಕುರಿತು ತಮ್ಮ ವೈದ್ಯಕೀಯ ಅನುಭವ ಒದಗಿಸಿದ್ದಾರೆ.