ನಮ್ಮ ದೇಹ ಮನಸ್ಸಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ತಿರುವಳ್ಳುವರ್, ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ ಸರ್ವಜ್ಞರಂತಹ ಚಿಂತಕರು ನೀಡಿದ ಅನುಪಾನದ ಮಹತ್ವ, ವಿಶ್ಲೇಷಣೆಯನ್ನು ಈ ಕೃತಿಯು ಒಳಗೊಂಡಿದೆ. ಒಗಟುಗಳಲ್ಲಿ ಶರೀರ, ವರ್ಣದಂಡಗಳ ತುದಿ, ಬದಲಾಗುತ್ತಿರುವ ಹವಾಮಾನ, ನಗರೀಕರಣ, ಆಧುನೀಕರಣ, ಆಸ್ಪತ್ರೆಗಳು, ವೈದ್ಯ ಸಾಹಿತ್ಯ ಮೊದಲಾದ ಸಂಗತಿಗಳ ಕುರಿತು ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ. ಮನುಷ್ಯ ಜೀವನದಲ್ಲಿ ನಗುವಿನ ಪಾತ್ರ, ಸುಸ್ತು ಒತ್ತಡವನ್ನು ನಿಭಾಯಿಸುವ ಬಗೆ, ಮಾತು ಮೌನದ ಉಪಯುಕ್ತತೆ ವಿವರಗಳನ್ನು ಒದಗಿಸಲಾಗಿದೆ.
©2024 Book Brahma Private Limited.