ಮಹಿಳೆಯ ಬದುಕು ಸಂಕೀರ್ಣ, ಋತುಚಕ್ರ ಆರಂಭವಾದಾಗಿನಿಂದ ಋತುಬಂಧವವರೆಗೆ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಆ ಬದಲಾವಣೆಗಳು ಅನೇಕ ಆತಂಕ, ಗೊಂದಲಗಳನ್ನು ತರುತ್ತದೆ. ಮಹಿಳೆ ಬದುಕಿನುದ್ದಕ್ಕೂ ಋತುಚಕ್ರದ ಹಲವಾರು ಹಂತಗಳನ್ನು ದಾಟಿ ಬರಬೇಕಿರುವಾಗ ಸೂಕ್ತ ಮಾಹಿತಿ ಅತ್ಯಗತ್ಯ. ಅಂತಹ ಮಾಹಿತಿ ಮತ್ತು ಸೂಕ್ತ ಪರಿಹಾರ, ಸಾಮಾಜಿಕ ಮಿಧ್ಯೆಗಳನ್ನು ತೆರೆದಿಡುತ್ತದೆ. ಮುಟ್ಟಿನ ಕುರಿತು ಅನೇಕ ಮೂಢನಂಬಿಕೆಗಳು ಸುತ್ತುವರೆದು, ಹೆಣ್ಣಿನ ಮತ್ತು ತಾಯ್ತನದ ತುಂಬು ತೃಪ್ತಿಯನ್ನು ಅನುಭವಿಸುವಲ್ಲಿ ಹಾರ್ಮೋನುಗಳ ಪಾತ್ರ ಬಹಳ ಮಹತ್ವದ್ದು ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE