ಉಸಿರಾಟ ನಿಂತರೇ ಮಾನವನು ಬದುಕುಲಾರ. ಮನುಷ್ಯರ ಜೀವಂತಿಕೆ ವ್ಯಕ್ತವಾಗುವುದೇ ಅವರ ಉಸಿರಾಟದಿಂದ. ಅದೇ ರೀತಿ ಪ್ರಾಣವಾಯುವಿನ ಮೂಲಕ ರೋಗಕಾರಕ ಕ್ರಿಮಿ ಕೀಟಗಳು ನಮ್ಮ ದೇಹವನ್ನು ಸೇರುವ ಒಂದು ಸಂಭಾವ್ಯತೆ ಇರುವುದು ಕೂಡಾ ನಮ್ಮ ಉಸಿರಾಟದ ಮೂಲಕವೇ. ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಶ್ವಾಸಕೋಶದ ಸಮಸ್ಯೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಲೇಖಕ ಡಾ.ಪಿ.ಎಸ್.ಶಂಕರ್ ರವರು ಶ್ವಾಸದ ಸ್ವಸ್ಥ ನಿರ್ವಹಣೆ ಮತ್ತು ಪ್ರಾಥಮಿಕ ಜ್ಞಾನದ ಕುರಿತು ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.
ನಮ್ಮ ದೇಹದಲ್ಲಿ ಶ್ವಾಸಕೋಶ ಆರೋಗ್ಯ ವ್ಯವಸ್ಥೆ ಹೇಗಿದೆ ಎಂಬುದನ್ನು ಈ ಕೃತಿಯು ವಿವರಿಸುತ್ತದೆ. ಶ್ವಾಸಕೋಶವು ಉಸಿರಾಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಮೇಲೆ ಗಂಟಲಲ್ಲಿ ಧ್ವನಿ ಪೆಟ್ಟಿಗೆಯಡಿ, ಕತ್ತಿನ ಮುಂಭಾಗದಲ್ಲಿ ಇರುವ ಗಾಳಿಕೊಳವೆ ಶ್ವಾಸನಾಳ. ಅದು ಕೆಳಗೆ ಎದೆಗೂಡನ್ನು ತಲುಪಿ ಎರಡು ಮುಖ್ಯ ಉಸಿರು ನಾಳಗಳಾಗಿ ಕವಲೊಡೆಯುತ್ತದೆ. ಹೀಗೆ ಶ್ವಾಸಕೋಶ ವ್ಯವಸ್ಥೆಯ ಕುರಿತು ಈ ಕೃತಿಯು ವಿವರಿಸುತ್ತಿದೆ.
ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...
READ MORE