ವೈಜ್ಞಾನಿಕ ಮನೋಭಾವದಿಂದ ಮಾನವನನ್ನು ಅರಿಯುವ ನಿರಂತರದ ಪ್ರಯತ್ನವಾಗಿ ಈ ಕೃತಿ ಹೊರಬಂದಿದೆ.
ಈ ಕೃತಿಯ ಲೇಖಕರಾದ ಬಸವಪ್ರಭು ಶೀಪರಮಟ್ಟಿ ಮತ್ತು ಪ್ರೊ. ನಾಮದೇವ ಬಡಿಗೇರರ ಸಂಪಾದನೆಯ ಬರಹಗಳಲ್ಲಿ ಮೂಡಿರುವ ಈ ಪುಸ್ತಕ ಮಾನವನ ದೇಹಕ್ಕೆ ಸಂಬಂಧಿಸಿದಂತೆ ಮೂಳೆಗಳು ಮತ್ತು ಸ್ನಾಯುಗಳು, ಜನನಾಂಗಗಳು ಹಾಗೂ ಸಂತಾನೊತ್ಪತ್ತಿ, ಹೃದಯ, ಜಠರ, ಮೆದುಳು, ನರಮಂಡಲ ಬಗ್ಗೆ ವಿವರಣೆಯನ್ನೂ ಸಹ ನೀಡಿದ್ದಾರೆ.
ಮನಸ್ಸು ಮತ್ತು ಅದರ ಬಿಂಬಗಳು, ನಾವಿನ್ನೂ ಅರಿಯದ ನಮ್ಮ ಕೆಲವು ವಿಷಯಗಳು, ನಾವು ನಾವಲ್ಲ !, ಭಾರತೀಯ ಆಧ್ಯಾತ್ಮಿಕತೆಯ ನೆರಳಿನಲ್ಲಿ ಮಾನವ ದೇಹ, ಇನ್ನೂ ಹಲವಾರು ಲೇಖನ ಸಂಗ್ರಹಗಳು ಈ ಪುಸ್ತಕದಲ್ಲಿವೆ.
.ಬಸವಪ್ರಭು ಶೀಪರಮಟ್ಟಿ ಲೇಖಕರು. ಕೃತಿಗಳು: ಚಮತ್ಕಾರಿ ದೇಹ... ವಿಸ್ಮಯಕಾರಿ ಮನಸ್ಸು... ವಿಶ್ವಂಭರಿ ಪ್ರಜ್ಞೆ ...
READ MORE