ವೈದ್ಯೆ ಲೇಖಕಿ ಲೀಲಾವತಿ ದೇವದಾಸ ಅವರ ಕೃತಿ-ಸಮೃದ್ಧ ಜೀವನ ಹೇಗೆ?. ಎಲ್ಲಕ್ಕಿಂತ ದೊಡ್ಡ ಸಂಪತ್ತೆಂದರೆ ಆರೋಗ್ಯ. ಅದನ್ನು ಕಾಯ್ದಯಕೊಂಡರೆ ಮಾತ್ರ ಉತ್ತಮ ಹಾಗೂ ಆರೊಗ್ಯಕರ ಜೀವನ ನಡೆಸುವುದು ಸಾಧ್ಯ. ಈ ಸಮೃದ್ಧ ಜೀವನ ಕುರಿತು ರಹಸ್ಯವನ್ನು ಸರಳವಾಗಿ ಸಲಹೆಗಳ ಮೂಲಕ ಹೇಳಿದ ಕೃತಿ ಇದು. ದಂಪತಿ ಯ ಪರಸ್ಪರ ಹೊಂದಾಣಿಕೆ, ಮಗುವಿನ ಬೆಳವಣಿಗೆಯಲ್ಲಿ ವಹಿಸಬೇಕಾದ ಎಚ್ಚರಿಕೆ ಈ ಎಲ್ಲ ಅಂಶಗಳ ಕುರಿತು ಲೇಖಕರು ವಿವರಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯರಾದ ಲೀಲಾವತಿ ದೇವದಾಸ್ ಅವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಬರಹಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ಜನಿಸಿದ್ದು 1930 ಮಾರ್ಚ್ 30ರಂದು. ವೈದ್ಯಕೀಯ ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳೆಂದರೆ ಸ್ತ್ರೀ ಸಂಜೀವಿನಿ, ಸ್ತ್ರೀ ಆರೋಗ್ಯ ಸಂರಕ್ಷಣೆ ಹೇಗೆ?, ಹೆರಿಗೆ, ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ, ಗರ್ಭಕೋಶದ ಕ್ಯಾನ್ಸರ್ ಅನ್ನು ದೂರವಿರಿಸಿ, ನಾನು ಗೌರಿಯ ಗರ್ಭಕೋಶ (ವೈದ್ಯಕೀಯ ಕೃತಿಗಳು), ಆಸ್ಪತ್ರೆಯಲ್ಲಿ ಹಾಸ್ಯ, ಮುಸುಕಿನ ಗುಡದ್ದು, ಕನ್ನಡ ವೈದ್ಯ ವಿಶ್ವಕೋಶ, ಬೈಬಲ್ಲಿನ ಅನಾಮಿಕ ಸ್ತ್ರೀಯರು ಮುಂತಾದವು. ಇವರಿಗೆ ಅತ್ತಿಮಬ್ಬೆ ...
READ MORE