ಯೋಗ ಮತ್ತು ಮಕ್ಕಳ ಆರೋಗ್ಯ

Author : ನಾಗರಾಜ ಆರ್. ಸಾಲೋಳ್ಳಿ

Pages 102

₹ 200.00




Year of Publication: 2022
Published by: Nesara Anushree Neelgagan & Bhoomi Yoga Foundation
Address: #54, Manju Nilaya, Raghoji Layout, Om Nagar, Sedam Road, Kalaburagi - 585 105
Phone: 9972776062

Synopsys

ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ನ ಯೋಗ ಶಿಕ್ಷಕರಾದ ನಾಗರಾಜ ಆರ್. ಸಾಲೋಳ್ಳಿಯವರು ಕಲಬುರಗಿಯ ಶಹಬಾದ ತಾಲೂಕಿನ ಮಾಲಗತ್ತಿ ಗ್ರಾಮದವರು. ಅಂತರಾಷ್ಟ್ರೀಯ ಯೋಗ ವಿಜೇತರಾದ ಇವರು ಯೋಗ ಸಾಧನೆಯಿಂದ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ೨೦೦೨ ರಿಂದ ಯೋಗಾಭ್ಯಾಸದಲ್ಲಿ ತೊಡಗಿ ಮುಂದೆ ಎಮ್. ಎಸ್ಸಿ. ಸ್ನಾತಕ ಪದವಿಯನ್ನು ಯೋಗದಲ್ಲಿಯೆ ಪಡೆದು, ನಂತರ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಹಾಗೂ ಸಾರ್ವಜನಿಕರಿಗಾಗಿ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ದತಿ ವಿಷಯಗಳ ಮೇಲೆ ೧೦೦ ಕ್ಕೂ ಹೆಚ್ಚಿನ ಉಚಿತ ತರಬೇತಿ ಶಿಬಿರಗಳನ್ನು, ಉಪನ್ಯಾಸಗಳನ್ನು ಹಾಗೂ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ, ಕಲಬುರಗಿಯ ಆಕಾಶವಾಣಿ ಹಾಗೂ ೯೩.೫ ಖeಜ ಈಒ ಗಳಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಬಿತ್ತರಗೊಂಡಿವೆ.ಯೋಗಾಧ್ಯಯನ ಮತ್ತು ತರಬೇತಿಗಳಿಂದಾಗಿ ಯೋಗ ಹಾಗೂ ಆರೋಗ್ಯ ವಿಷಯಗಳ ಮೇಲೆ ರಾಷ್ಟç ಹಾಗೂ ಅಂತರಾಷ್ಟಿçÃಯ ಯೋಗ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜೊತೆಗೆ ವಿವಿಧ ನಿಯತಕಾಲಿಕೆಗಳಲ್ಲಿ ೨೦ಕ್ಕೂ ಹೆಚ್ಚಿನ ಲೇಖನಗಳನ್ನು ಹಾಗೂ ‘ಯೋಗರತ್ನ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರಲ್ಲದೆ, ಸಿದ್ಧ ಸಾಧಕ, ಯುವ ಪ್ರಶಸ್ತಿ, ಯೋಗಕಿರಣ, ಯೋಗ ಕುಸುಮ, ಯೋಗರತ್ನ, ಯೋಗ ಚೇತನ ಹಾಗೂ ಯೋಗ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮಕ್ಕಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವ “ಯೋಗ ಮತ್ತು ಮಕ್ಕಳ ಆರೋಗ್ಯ” ಕೃತಿಯು ಪ್ರಸ್ತುತ ಅವಶ್ಯಕತೆಗಳಲ್ಲಿ ಒಂದಾಗಿದೆ. ಲೇಖಕರು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾರ್ಗದರ್ಶಿಸುವ ಉತ್ತಮ ಕೃತಿಯನ್ನು ಓದುಗರಿಗೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆೆ. ಲೇಖಕರ ಈ ಪ್ರಯತ್ನವು ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಲಿ ಎಂದು ಆಶೀಸುತ್ತೇವೆ.

About the Author

ನಾಗರಾಜ ಆರ್. ಸಾಲೋಳ್ಳಿ

ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ನ ಯೋಗ ಶಿಕ್ಷಕರಾದ ನಾಗರಾಜ ಆರ್. ಸಾಲೋಳ್ಳಿಯವರು ಕಲಬುರಗಿಯ ಶಹಬಾದ ತಾಲೂಕಿನ ಮಾಲಗತ್ತಿ ಗ್ರಾಮದವರು. ಅಂತರಾಷ್ಟ್ರೀಯ ಯೋಗ ವಿಜೇತರಾದ ಇವರು ಯೋಗ ಸಾಧನೆಯಿಂದ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ೨೦೦೨ ರಿಂದ ಯೋಗಾಭ್ಯಾಸದಲ್ಲಿ ತೊಡಗಿ ಮುಂದೆ ಎಮ್. ಎಸ್ಸಿ. ಸ್ನಾತಕ ಪದವಿಯನ್ನು ಯೋಗದಲ್ಲಿಯೆ ಪಡೆದು, ನಂತರ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಹಾಗೂ ಸಾರ್ವಜನಿಕರಿಗಾಗಿ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ದತಿ ವಿಷಯಗಳ ಮೇಲೆ ೧೦೦ ಕ್ಕೂ ಹೆಚ್ಚಿನ ಉಚಿತ ತರಬೇತಿ ಶಿಬಿರಗಳನ್ನು, ಉಪನ್ಯಾಸಗಳನ್ನು ಹಾಗೂ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ, ಕಲಬುರಗಿಯ ...

READ MORE

Related Books