ಲೇಖಕಿ ಶಾಂತಾ ನಾಗರಾಜ್ ಅವರ ’ಯಾನಸಂಸ್ಕೃತಿ’ ಕೃತಿಯು ಪ್ರವಾಸ ಕಥನವಾಗಿದೆ. ಈ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಣಗೊಂಡಿದೆ. 'ಯಾನ ಸಂಸ್ಕೃತಿ' ಭೌತಿಕ ವಿವರಗಳೊಂದಿಗೆ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಕಾಣುತ್ತದೆ. ವಿಮರ್ಶಾಪರವಾದ ಒಲವಿದ್ರೂ ಅನ್ಯ ದೇಶೀಯರನ್ನು ಮನುಷ್ಯರನ್ನಾಗಿಯೇ ಕಾಣುವ ನಿಲುವು ಇಲ್ಲಿದೆ, ಅಂತೆಯೇ , ಇದು ಬರಿಯ ಪ್ರವಾಸ ಕಥನವಲ್ಲ, ಸಂಸ್ಕೃತಿಯ ಸಹಾನುಭೂತಿಯ ಅಧ್ಯಯನವಾಗಿದೆ. ಈ ಪುಸ್ತಕಕ್ಕೆ ರುಚಿಯೂ, ಸುಲಲಿತವಾಗಿ ಓದಿಕೊಂಡು ಹೋಗುವ ಗುಣವೂ ಮತ್ತು ಎಲ್ಲೋ ಆಳದಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಸುಪ್ತಶಕ್ತಿಯೂ ಲಭಿಸಿವೆ. ಅರಿವನ್ನು ವಿಸ್ತರಿಸುವ , ಗಹನವಾದ ವಿಷಯವಿದ್ದೂ, ರುಚಿ ಹಿಡಿಸುವ, ವಿಶ್ಲೇ಼ಷಣೆ ನಡೆಸಿಯೂ, ರಸಸ್ಪಂದಿಯಾಗುವ ಮೌಲಿಕತೆ ಈ ಕಥಾನಕಕ್ಕೆ ಇದೆ’ ಎಂದು ಲೇಖಕಿ ಅಭಿಪ್ರಾಯಪಟ್ಟಿದ್ದಾರೆ. .
©2024 Book Brahma Private Limited.