ಡಾ. ಬಿಮಲ್ ಛಾಜರ್ ಅವರು ವೃತ್ತಿಯಿಂದ ವೈದ್ಯರು. ಮನುಷ್ಯನ ತೂಕಕ್ಕೂ ಆತನ ಎತ್ತರಕ್ಕೂ ಒಂದು ಸಮೀಕರಣವಿದೆ. ವ್ಯಕ್ತಿಯ ಇಂತಿಷ್ಟು ಎತ್ತರಕ್ಕೆ ಇಂತಿಷ್ಟು ತೂಕ ಇರಬೇಕು ಎಂಬುದನ್ನು ವೈದ್ಯಕೀಯವಾಗಿ ನಿರೀಕ್ಷಿಸಲಾಗುತ್ತದೆ. ಈ ನಿರೀಕ್ಷಿತ ಸೂತ್ರದನ್ವಯ ಫಲಿತಾಂಶಗಳು ಇರದಿದ್ದರೆ ಅದು ಅನಾರೋಗ್ಯಕಾರಿ ಲಕ್ಷಣಗಳ ಶರೀರವಾಗುತ್ತದೆ. ಕುಳ್ಳ ವ್ಯಕ್ತಿಯು ಸ್ಥೂಲಕಾಯದವ ನಾಗಿದ್ದರೆ ಅದು ಆರೋಗ್ಯದ ಲಕ್ಷಣವಲ್ಲ. ಎತ್ತರಕ್ಕೆ ಅನುಗುಣವಾಗಿ ಶರೀರದ ತೂಕ ಇರಬೇಕು. ಒಂದು ವೇಳೆ ಹೆಚ್ಚಿದ್ದರೆ ತೂಕ ಕಡಿಮೆ ಮಾಡಿಕೊಳ್ಳುವ ಕಸರತ್ತು ಸೇರಿದಂತೆ ವೈದ್ಯಕೀಯ ಔಷಧಿಗಳು ಇವೆ. ಹೀಗೆ, ಲೇಖಕರು 201 ಸಲಹೆಗಳನ್ನು ನೀಡಿದ್ದು, ಅವುಗಳ ಪಾಲನೆಯು ಖಂಡಿತವಾಗಿಯೂ ದೇಹದ ತೂಕ ಕಡಿಮೆಗೊಳಿಸುತ್ತದೆ ಎಂದು ವೈದ್ಯ ಲೇಖಕರು ಇಲ್ಲಿ ಮನದಟ್ಟು ಮಾಡಿದ್ದಾರೆ.
©2024 Book Brahma Private Limited.