ಡಾ.ಟಿ.ಎಂ. ಶಿವಾನಂದಯ್ಯನವರು ತಮ್ಮ ವೃತ್ತಿ ಜೀವನದ ಅನುಭವವನ್ನು `ಸರ್ವರಿಗೂ ಆಯುರ್ವೇದ’ ಎಂಬ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಈ ಪುಸ್ತಕದಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವಂತಹ ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ಸರಳ ಭಾಷೆಯಲ್ಲಿ ಬರೆದ ವೈದ್ಯ ವಿಜ್ಞಾನದ ಮಾಹಿತಿಗಳಿವೆ. ಶ್ರೀಯುತರು ತಮ್ಮ ಕೃತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ನೆಗಡಿ, ಕೆಮ್ಮು, ಅತಿಸಾರ, ಮಲಬದ್ಧತೆ, ಕಣ್ಣಿನ ತೊಂದರೆಗಳು, ಮಕ್ಕಳ ಖಾಯಿಲೆಗಳು, ಸ್ತ್ರೀಯರ ಸಮಸ್ಯೆಗಳು, ಮನೋವಿಕಾರಗಳು, ಹದಿಹರೆಯದವರ ಸಮಸ್ಯೆಗಳು ಮುಂತಾದವುಗಳಿಗೆ ನಿವಾರಣೋಪಾಯಗಳಾಗಿ ಬಳಸಬಹುದಾದ ದ್ರವ್ಯ ಹಾಗೂ ಔಷಧಿಗಳ ಪರಿಚಯ ಮಾಡಿ ಕೊಟ್ಟಿದ್ದಾರೆ.
ಔಷಧಿ ಸೇವನೆಯಷ್ಟೇ ಪಥ್ಯಾಪಥ್ಯ ಪಾಲನೆಯು ಮಹತ್ವವಾದುದೆಂದು ತಿಳಿಸಿ ಕೊಟ್ಟಿದ್ದು. ಕೃತಿಕಾರರು ತಮ್ಮ ಕೃತಿಯಲ್ಲಿ ಆಯುರ್ವೇದ ಹಾಗೂ ಆಧುನಿಕ ವೈದ್ಯಶಾಸ್ತ್ರದ ಶಬ್ದಗಳ ತುಲನಾತ್ಮಕ ಬಳಕೆಯನ್ನು ಸಮರ್ಥವಾಗಿ ಮಾಡಿದ್ದಾರೆ. ಪುಸ್ತಕ ಕೃತಿ “ಸರ್ವರಿಗೂ ಆಯುರ್ವೇದ” ಆಯುರ್ವೇದ ವಿದ್ಯಾರ್ಥಿಗಳು, ಚಿಕಿತ್ಸಕರುಗಳು, ಅಧ್ಯಾಪಕರು, ಆಯುರ್ವೇದ ಆಸಕ್ತರು, ಸರ್ವರೂ ಅವಲೋಕಿಸಬಹುದಾಗಿದೆ.
©2024 Book Brahma Private Limited.